
ಬೆಂಗಳೂರು: ಕಳ್ಳರು ಹಣ, ಚಿನ್ನಾಭರಣ, ವಾಹನ ಕಳ್ಳತನ ಮಾಡುವ ಪ್ರಕರಣಗಳನ್ನು ನೋಡುತ್ತಿದ್ದೆವು. ಭಕ್ತರ ಸೋಗಿನಲ್ಲಿ ಬಂದು ದೇವಸ್ಥಾನದ ಹುಂಡಿ ಕಳುವು ಮಾಡುತ್ತಿರುವ ಪ್ರಕರಣಗಳು ಕೂಡ ಇತ್ತೀಚೆಗೆ ಬೆಳಕಿಗೆ ಬರುತ್ತಿವೆ. ಆದರೆ ಈಗ ಕಳ್ಳರು ಕೂದಲಿಗೂ ಕನ್ನ ಹಾಕುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೂದಲು ಕಳ್ಳನೊಬ್ಬ ಪ್ರತ್ಯಕ್ಷನಾಗಿದ್ದು, ತಲೆಕೂದಲನ್ನು ಕದ್ದೊಯ್ದ ಘಟನೆ ನಡೆದಿದೆ. ಬರೋಬ್ಬರಿ 27 ಮೂಟೆ ಕೂದಲನ್ನು ಕಳ್ಳ ಕದ್ದೊಯ್ದಿದ್ದಾನೆ.
ಖದೀಮರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೋಲದೇವನಹಳ್ಳಿಯ ಲಕ್ಷ್ಮೀಪುರ ಕ್ರಾಸ್ ನಲ್ಲಿ ಗೋಡೌನ್ ಒಂದರಲ್ಲಿ ಕೂದಲನ್ನು ಸಂಗ್ರಹಿಸಿಡಲಾಗಿತ್ತು. ಕೋಟ್ಯಂತರ ರೂಪಾಯಿ ಬೆಲೆಬಾಳುವ ಕೂದಲಿನ ಮುಟೆಗಳು ಎರಡು ದಿನಗಳ ಹಿಂದೆ ಕಳುವಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.