
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಕಟ್ಟದ ಕುಸಿತ ಸಂಭವಿಸಿದೆ. ಎರಡು ಅಂತಸ್ತಿನ ಮನೆ ಕುಸಿದು ಬಿದ್ದ ಘಟನೆ ಜೀವನ್ ಭೀಮಾನಗರದ ತಿಪ್ಪಸಂದ್ರದಲ್ಲಿ ನಡೆದಿದೆ.
ಪಕ್ಕದ ಕಟ್ಟಡದ ಪಾಯ ತೆಗೆಯುವ ವೇಳೆ ಎರಡು ಅಂತಸ್ತಿನ ಮನೆ ಕುಸಿದು ಬಿದ್ದಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರುಶೀಲನೆ ನಡೆಸಿದ್ದಾರೆ.