ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಬಾಂಗ್ಲಾ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುದುಕಪ್ಪ (28) ಬಂಧಿತ ಆರೋಪಿ. ಜನವರಿ 23ರಂದು ಬಾಂಗ್ಲಾ ಮೂಲದ ಮಹಿಳೆ ನಜ್ಮಾ ಎಂಬುವವರ ಶವ ಕೊಲೆಯಾದ ರೀತಿಯಲ್ಲಿ ಕಾಲುವೆಯಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರು. ಇದೀಗ ಅತ್ಯಾಚಾರವೆಸಗಿ ಕೊಲೆ ನಡೆಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾಗಿದ್ದ ಮಹಿಳೆ ನಜ್ಮಾ ಬಾಂಗ್ಲಾ ಮೂಲದವಳಾಗಿದ್ದು, ಪತಿ ಹಾಗೂ ಮಕ್ಕಳೊಂದಿಗೆ ಮನೆಕೆಲಸ ಮಾಡಿಕೊಂಡು ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಿದ್ದಳು. ಮುದುಕಪ್ಪನಿಗೆ ನಜ್ಮಾ ಹಳೆ ಪರಿಚಯ. ಸ್ನೇಹವಿತ್ತು. ಆದರೆ ಮದುವೆ ಬಳಿಕ ನಜ್ಮಾ ಮುದುಕಪ್ಪನ ಪರಿಚಯದಿಂದಲೂ ದೂರ ಉಳಿದಿದ್ದಳು. ಇದನ್ನು ಸಹಿಸಲಾಗದೇ ಮುದುಕಪ್ಪ ನಜ್ಮಾ ಹಿಂದೆ ಬಿದ್ದು ಕಿರುಕುಳ ನೀಡುತ್ತಿದ್ದ.
ಜ.23ರಂದು ನಜ್ಮಾಳನ್ನು ಹಿಂಬಾಲಿಸಿ ಹೋಗಿದ್ದ ಮುದುಕಪ್ಪ, ರಸ್ತೆಯಲ್ಲಿ ತಡೆದು ನಿಲ್ಲಿಸಿ ಮಾತನಾಡಿಸಿದ್ದ ಹೀಗೆ ಮಾತನಾಡಿಸಿದವನೇ ಬಲವಂತವಾಗಿ ಆಕೆಯನ್ನು ಎಳೆದೊಯ್ದು ಪೊಯೊಂದರಲ್ಲಿ ಅತ್ಯಾಚಾರವೆಸಗಿ ಬಳಿಕ ಆಕೆಯನ್ನು ಹತ್ಯೆಗೈದು, ಕಾಲುವೆಗೆ ಶವ ಬಿಸಾಕಿ ಪರಾರಿಯಾಗಿದ್ದ.
ಆರೋಪಿಯನ್ನು ಇದೀಗ ರಾಮಮೂರ್ತಿ ನಗರ ಪೊಲೀಸರು ಬಂಧಿಸಿ, ತನಿಖೆ ನಡೆಸಿದ್ದಾರೆ.