
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರ್ಓಬ್ಬರಿ 2.12 ಕೋಟಿ ವಿದೇಶಿ ಹಣವನ್ನು ಜಪ್ತಿ ಮಾಡಲಾಗಿದೆ. ಅಕ್ರಮವಾಗಿ ಶ್ರೀಲಂಕಾಗೆ ಈ ಹಣವನ್ನು ಸಾಗಾಟ ಮಾಡುತ್ತಿದ್ದ ವೇಳೆ ಅಧಿಕಾರಿಗಳು ಜಪ್ತಿ ಮಾಡಿದ್ದು, ಮೂವರನ್ನು ಬಂಧಿಸಿದ್ದಾರೆ.
ಶ್ರೀಲಂಕಾ ಮೂಲದ ವಿಮಲ್ ರಾಜ್ ತುರೈ ಸಿಗಂ, ತಿಲೆಪನ್ ಜಯಂತಿ ಕುಮಾರ್, ಭಾರತದ ವೀರ್ ಕುಮಾರ್ ಬಂಧಿತರು.
ಪ್ರಯಾಣಿಕರ ಲಗೆಜ್ ಬ್ಯಾಗ್ ನಲ್ಲಿ ವಿದೇಶಿ ಹಣ ಇಟ್ಟುಕೊಂಡು ಮೂವರು ಪ್ರಯಾಣಿಕರು ಸಾಗಿಸುತ್ತಿದರು. ಇಮಿಗ್ರೇಷನ್ ಚೆಕ್ಕಿಂಗ್ ವೇಳೆ ಬ್ಯಾಗ್ ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ತಕ್ಷಣ ಏರ್ ಪೋರ್ಟ್ ಭದ್ರತಾ ಸಿಬ್ಬಂದಿ ಐಟಿ ಹಾಗೂ ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪರಿಶೀಲನೆ ನಡೆಸಿದ ಇಡಿ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ.