ಸಿಂಹಳೀಯ ಹಾಡು ಮನಿಕೆ ಮಾಗೆ ಹಿತೆ ಹಲವಾರು ವಾರಗಳಿಂದ ದೇಸಿ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ನೀವು ಇಂಟರ್ನೆಟ್ ನಲ್ಲಿ ಸಕ್ರಿಯರಾಗಿದ್ದಾರೆ, ನಿಮಗಿದು ತಿಳಿದಿರಬಹುದು.
ಯೂಟ್ಯೂಬ್ನಲ್ಲಿ ಈಗ 182 ಮಿಲಿಯನ್ ವೀಕ್ಷಣೆಗಳನ್ನು ಹೊಂದಿರುವ ಹಾಡಿನ ವಿಡಿಯೋಗೆ ಸೆಲೆಬ್ರೆಟಿಗಳು, ಸಾಮಾನ್ಯರು ಸೇರಿದಂತೆ ಅನೇಕರು ಈ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಅಲ್ಲದೆ ಬೇರೆ ಭಾಷೆಯ ಆವೃತ್ತಿಯಲ್ಲೂ ಈ ಹಾಡನ್ನು ಹಾಡಲಾಗಿದೆ.
ಇದೀಗ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಅವರು ಮಾನಿಕೆ ಮ್ಯಾಗೆ ಹಿತೆ ಟ್ರೆಂಡ್ಗೆ ಇತ್ತೀಚಿನವರಾಗಿ ಸೇರ್ಪಡೆಗೊಂಡಿದ್ದಾರೆ. ಕೆಂಪು ಸ್ಲೀವ್ಲೆಸ್ ಕುರ್ತಿ ಧರಿಸಿದ ನಟಿ, ಹಾಡಿಗೆ ತಮ್ಮ ಮನೆಯ ಬಾಲ್ಕನಿಯಲ್ಲಿ ನೃತ್ಯ ಮಾಡಿದ್ದಾರೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ.
ಕೆಲವು ದಿನಗಳ ಹಿಂದೆ, ಹಿರಿಯ ವ್ಯಕ್ತಿಯೊಬ್ಬರು ಮನಿಕೆ ಮ್ಯಾಗೆ ಹಿತೆ ಸಾಹಿತ್ಯವನ್ನು ಹಾಸ್ಯಾಸ್ಪದವಾಗಿ ತಪ್ಪಾಗಿ ಉಚ್ಚರಿಸಿದ್ದಕ್ಕಾಗಿ ವೈರಲ್ ಆಗಿತ್ತು.
ಶ್ರೀಲಂಕಾದ ಗಾಯಕರಾದ ಯೋಹಾನಿ ದಿಲೋಕಾ ಡಿ ಸಿಲ್ವಾ ಹಾಡಿದ್ದಾರೆ. ಈ ಹಾಡು ಮೇ ತಿಂಗಳಲ್ಲಿ ಬಿಡುಗಡೆಯಾದ ನಂತರ ಸಾಕಷ್ಟು ಅಲೆಯನ್ನೇ ಸೃಷ್ಟಿಸಿದೆ. ದಿನೇದಿನೇ ಈ ಹಾಡಿನ ಕ್ರೇಜ್ ಹೆಚ್ಚುತ್ತಲೇ ಇದೆ.
ಇದರ ಅಗಾಧ ಯಶಸ್ಸು ತೆಲುಗು, ತಮಿಳು, ಹಿಂದಿ, ಪಂಜಾಬಿ, ನೇಪಾಳಿ, ಬೆಂಗಾಲಿ, ಭೋಜ್ಪುರಿ ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ವಿಭಿನ್ನ ಕಲಾವಿದರಿಂದ ಡಬ್ಬಿಂಗ್ ಆವೃತ್ತಿಗಳು ಲಗ್ಗೆಯಿಟ್ಟಿವೆ.