ಈ ಬಾರಿ ಪ್ರೊ ಕಬಡ್ಡಿಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಆಡಿರುವ 14 ಪಂದ್ಯಗಳಲ್ಲಿ ಹತ್ತರಲ್ಲಿ ಜಯಗಳಿಸಿದರೆ ಎರಡು ಪಂದ್ಯದಲ್ಲಿ ಸೋಲು ಹಾಗೂ ಎರಡು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಈ ಮೂಲಕ ಅಂಕ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಜೈಪುರ್ ಪಿಂಕ್ ಪ್ಯಾಂಥರ್ಸ್ ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಿದ್ದಾರೆ. ಇಂದು ಪ್ರೊ ಕಬಡ್ಡಿಯ 84ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗಲಿವೆ.
ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡಕ್ಕೆ ಸೋಲಿಸಬೇಕಾದರೆ ಮಣಿಂದರ್ ಸಿಂಗ್ ಅವರಿಂದ ಸಾಕಷ್ಟು ರೈಡಿಂಗ್ ಪಾಯಿಂಟ್ ಗಳು ಬೇಕಾಗುತ್ತದೆ. ಈ ಪಂದ್ಯದ ಬಳಿಕ ತೆಲುಗು ಟೈಟಾನ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ಮುಖಮುಖಿಯಾಗುತ್ತಿದ್ದು, ತೆಲುಗು ಟೈಟನ್ಸ್ ತನ್ನ ಹೋಂ ಗ್ರೌಂಡ್ ನಲ್ಲಿ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ.