ಪಶ್ಚಿಮ ಬಂಗಾಳದ ಹೌರಾದಲ್ಲಿ ರಾಮನವಮಿ ಮೆರವಣಿಗೆ ವೇಳೆ ಗದ್ದಲ ಉಂಟಾದ ಕಾರಣ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಮನವಮಿಯನ್ನು ಶಾಂತಿಯುತವಾಗಿ ಆಚರಿಸಲು ಮತ್ತು ಮೆರವಣಿಗೆಗಳನ್ನು ಕೈಗೊಳ್ಳುವಾಗ ಯಾವುದೇ ರೀತಿಯ ಹಿಂಸಾಚಾರದಿಂದ ದೂರವಿರಿ ಎಂದು ರಾಜ್ಯದ ಜನರಿಗೆ ಮನವಿ ಮಾಡಿದ ನಂತರವೂ ಈ ಬೆಳವಣಿಗೆ ನಡೆದಿದೆ.
ಈ ಪ್ರದೇಶದಲ್ಲಿ ಹಲವಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗದ್ದಲ ಭುಗಿಲೆದ್ದ ನಂತರ ಮತ್ತೊಂದು ಪೊಲೀಸ್ ತಂಡ ಧ್ವಜ ಮೆರವಣಿಗೆ ನಡೆಸಿತು.
ರಾಮನವಮಿ ಮೆರವಣಿಗೆ ಶಾಂತಿಯುತವಾಗಿ ಮಾಡಿ. ರಂಜಾನ್ ನಡೆಯುತ್ತಿರುವುದರಿಂದ ದಯವಿಟ್ಟು ಮುಸ್ಲಿಂ ಪ್ರದೇಶಗಳಲ್ಲಿ ಶೋಭಾಯಾತ್ರೆ ನಡೆಸುವಾಗ ಎಚ್ಚರಿಕೆ ವಹಿಸಿ. ಶಾಂತಿಯುತವಾಗಿ ಆಚರಿಸಿ. ಆದರೆ ಹಿಂಸೆಯನ್ನು ಸೃಷ್ಟಿಸಲು ಪ್ರಯತ್ನಿಸಬೇಡಿ. ಪ್ರಚೋದನೆಗೆ ಒಳಗಾಗಬೇಡಿ ಎಂದು ಹೇಳಿದ್ದರೂ, ಕೆಲವರು ಮೆರವಣಿಗೆ ವೇಳೆ ಕತ್ತಿ, ಚಾಕು ಹಿಡಿದು ಸಾಗುವುದಾಗಿ ಹೇಳಿದ್ದರು ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಹೌರಾದಲ್ಲಿ ಶ್ರೀ ರಾಮನವಮಿ ಶೋಭಾ ಯಾತ್ರೆ ವೇಳೆ ಹಿಂಸಾಚಾರ ನಡೆದಿದೆ. ಹೌರಾದ ಶಿವಪುರಿ ಪ್ರದೇಶದಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ರಸ್ತೆ ಬದಿ ನಿಲ್ಲಿಸಿದ್ದ ಹಲವು ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.