ಒಂದು ವರ್ಷದಿಂದ ಕಾಣೆಯಾಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ 55-ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ಬಾಂಗ್ಲಾದೇಶದ ಬರಿಸಾಲ್ ಜಿಲ್ಲೆಯ ಗಡಿ ಭಾಗದಲ್ಲಿ ಪತ್ತೆ ಮಾಡಲಾಗಿದೆ.
ರಜ಼ಿಯಾ ಬೀಬಿ ಹೆಸರಿನ ಮಹಿಳೆಯೊಬ್ಬರು ತಮ್ಮ ಸಹೋದರ ಸಂಬಂಧಿಯೊಂದಿಗೆ ವಿಡಿಯೋ ಕಾಲ್ ಮೂಲಕ ಜ್ಹಾಗ್ರಂ ಆಸ್ಪತ್ರೆಯಿಂದ ಮಾತನಾಡಿದ್ದಾರೆ. ಇಬ್ಬರನ್ನೂ ಮತ್ತೆ ಸೇರಿಸಿದ ಶ್ರೇಯ ಪಶ್ಚಿಮ ಬಂಗಾಳದ ರೇಡಿಯೋ ಆಪರೇಟರ್‌ಗಳಿಗೆ ಸಲ್ಲಬೇಕು.
ಕಳೆದ ರಂಜ಼ಾನ್ ವೇಳೆ ತಪ್ಪಿಸಿಕೊಂಡಿದ್ದ ಬೀಬಿ, ಜ್ಹಾಗ್ರಂ ಬಳಿ ಅನಾಮಿಕ ಮಂದಿಗೆ ಕಣ್ಣಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿಕ್ಕಿದ್ದು, ಆಕೆಯನ್ನು ಸ್ಥಳೀಯ ಮುನ್ಸಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ಜ್ಹಾಗ್ರಂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿದೆ.
BIG NEWS: ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪೊಲೀಸರ ವಶಕ್ಕೆ; ಕರ್ನಾಟಕವೇ ಬಂದ್ ಆಗುತ್ತೆ ಹುಷಾರ್…! ಎಚ್ಚರಿಕೆ ನೀಡಿದ ಪ್ರವೀಣ್ ಶಟ್ಟಿ
ಇದಾದ ಬಳಿಕ, ಪಶ್ಚಿಮ ಬಂಗಾಳ ರೇಡಿಯೋ ಕ್ಲಬ್‌ನ ಕಾರ್ಯದರ್ಶಿ ಅಂಬರೀಷ್ ನಾಗ್ ಬಿಸ್ವಾಸ್‌ಗೆ ಈ ವಿಷಯವನ್ನು ಸುಜಾತಾ ಭಟ್ಟಾಚಾರ್ಯ ಎಂಬ ಶಿಕ್ಷಕಿ ತಿಳಿಸಿದ್ದಾರೆ. ಹ್ಯಾಮ್ ರೇಡಿಯೋ ಸ್ವಯಂಸೇವಕರಾಗಿ ಕೆಲಸ ಮಾಡಿರುವ ಭಟ್ಟಾಚಾರ್ಯ ಮತ್ತು ನಿರ್ಮಲೇಂದು ಮಹತೋ, ಆಸ್ಪತ್ರೆಗೆ ಭೇಟಿ ನೀಡಿ ತಂತಮ್ಮ ಕುಟುಂಬಗಳಿಂದ ದೂರವಾಗಿದ್ದ ಮೂವರು ರೋಗಿಗಳನ್ನು ಕಂಡಿದ್ದಾರೆ.
“ಇವರಲ್ಲಿ ಒಬ್ಬರು ಹಿಂದಿ ಮಾತನಾಡನಬಲ್ಲ ಮಹಿಳೆಯಾಗಿದ್ದು, ಮತ್ತೊಬ್ಬರು ಬಾಂಗ್ಲಾದೇಶದಿಂದ ಬಂದಿದ್ದ, 15-16 ವರ್ಷದ ಹುಡುಗನೂ ಇದ್ದ. ಇವರೆಲ್ಲಾ ತಪ್ಪಿಸಿಕೊಂಡಿದ್ದ ಅನಾಮಿಕ ವ್ಯಕ್ತಿಗಳು. ಹಿಂದಿ ಮಾತನಾಡಬಲ್ಲ ಮಹಿಳೆಯೊಂದಿಗೆ 40 ನಿಮಿಷಗಳ ಕಾಲ ಸಂವಹನ ನಡೆಸಿದ ಬಳಿಕ, ಆಕೆಯ ತವರು ರಾಜ್ಯವನ್ನು ಊಹಿಸಲು ನಮ್ಮಿಂದ ಸಾಧ್ಯವಾಯಿತು. ಆಕೆಯ ಮಾತಿನಿಂದ ಆಕೆ ಬಾಂಗ್ಲಾದೇಶದಾಕೆ ಎಂದು ನಮಗೆ ಅರ್ಥವಾಯಿತು,” ಎಂದಿದ್ದಾರೆ ಬಿಸ್ವಾಸ್.