ಕಳೆದ 60 ವರ್ಷಗಳಿಂದ ಕೇವಲ ಒಂದು ರೂಪಾಯಿಗೆ ರೋಗಿಗಳ ಶುಶ್ರೂಷೆ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಖ್ಯಾತ ವೈದ್ಯ 84 ವರ್ಷದ ಸುಶೋವನ್ ವಿಧಿವಶರಾಗಿದ್ದಾರೆ.
ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಮಂಗಳವಾರದಂದು ಕೊಲ್ಕತ್ತಾದಲ್ಲಿ ನಿಧನರಾಗಿದ್ದಾರೆ. ಸುಶೋವನ್ ಅವರ ನಿಧನಕ್ಕೆ ಜನಸಾಮಾನ್ಯರು ಕಂಬನಿ ಮಿಡಿದಿದ್ದಾರೆ.
ಸುಶೋವನ್, ಒಂದು ರೂಪಾಯಿ ಪಡೆದು ರೋಗಿಗಳ ಶುಶ್ರೂಷೆ ಮಾಡಿಕೊಂಡು ಬಂದಿದ್ದು, ಬಡ ಜನತೆಯ ಪಾಲಿನ ದೇವರಾಗಿದ್ದರು. ಇವರ ಅನನ್ಯ ಸೇವೆಗಾಗಿ 2020ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಲಾಗಿತ್ತು.