ಪ್ರಯಾಗ್ರಾಜ್ನ ಮಹಾಕುಂಭದಲ್ಲಿ ಮಹಿಳೆಯರು ಸ್ನಾನ ಮತ್ತು ಬಟ್ಟೆ ಬದಲಾಯಿಸುವ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಹೂಗ್ಲಿ ಜಿಲ್ಲೆಯ ನಿವಾಸಿ ಅಮಿತ್ ಕುಮಾರ್ ಝಾ ಎಂಬಾತನನ್ನು ಮಹಾಕುಂಭದಲ್ಲಿ ಮಹಿಳೆಯರು ಸ್ನಾನ ಮತ್ತು ಬಟ್ಟೆ ಬದಲಾಯಿಸುವ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ ಆರೋಪದ ಮೇಲೆ ಪ್ರಯಾಗ್ರಾಜ್ ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಈ ಬಂಧನ ನಡೆದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಫಾಲೋವರ್ಸ್ಗಳನ್ನು ಗಳಿಸಲು ಮತ್ತು ವಿವಿಧ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಹಣಗಳಿಸಲು ವಿಡಿಯೋಗಳನ್ನು ಚಿತ್ರೀಕರಿಸಿದ್ದಾಗಿ ಝಾ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಝಾ ವಿರುದ್ಧ ಬಿಎನ್ಎಸ್ನ 296/79 ವಿಭಾಗಗಳು ಮತ್ತು ಐಟಿ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘಟನೆಯು ಗೌಪ್ಯತೆ ಮತ್ತು ವೈಯಕ್ತಿಕ ಲಾಭಕ್ಕಾಗಿ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳ ದುರ್ಬಳಕೆಯ ಬಗ್ಗೆ ಕಳವಳವನ್ನು ಹೆಚ್ಚಿಸಿದೆ.
ಪ್ರಯಾಗ್ರಾಜ್ ಪೊಲೀಸರು ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, “ಮಹಾಕುಂಭದಲ್ಲಿ ಮಹಿಳೆಯರು ಸ್ನಾನ ಮತ್ತು ಬಟ್ಟೆ ಬದಲಾಯಿಸುವ ವಿಡಿಯೋ ಮಾಡಿ ಅದನ್ನು ಯೂಟ್ಯೂಬ್ನಲ್ಲಿ ವೈರಲ್ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
महाकुंभ में महिलाओं के स्नान व कपड़े बदलने के वीडियो बनाकर यूट्यूब पर वायरल करने वाला अभियुक्त गिरफ्तार। pic.twitter.com/ceXrKNJFSs
— POLICE COMMISSIONERATE PRAYAGRAJ (@prayagraj_pol) February 27, 2025