ಮಾನ್ಸೂನ್ ಅಬ್ಬರಕ್ಕೆ ಅನೇಕ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಪರೀತ ಮಳೆಯ ಕಾರಣದಿಂದಾಗಿ ಜನಸಾಮಾನ್ಯರ ಪಾಡು ಹೇಳತೀರದಾಗಿದೆ.
ತಮ್ಮ 11 ತಿಂಗಳ ಮಗುವಿನೊಂದಿಗೆ ಕುಟುಂಬವೊಂದು ಪಕ್ಕದ ಮನೆಯ ಛಾವಣಿ ಮೇಲೆ ಆಶ್ರಯ ಪಡೆದ ಮನಕಲಕುವ ಘಟನೆಯೊಂದು ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಘಟಲ್‌ನಲ್ಲಿ ಜರುಗಿದೆ.
ಆರೋಗ್ಯಕ್ಕೆ ಸಹಕಾರಿ ʼಪಾಲಕ್’ ಸೊಪ್ಪು
ಮಗುವಿಗೆ ಲಸಿಕೆ ಹಾಕಲು ದೋಣಿಯಲ್ಲಿ ಆಸ್ಪತ್ರೆ ತಲುಪಿದ ಈ ಕುಟುಂಬವು ಘಟಲ್ ಪಟ್ಟಣದ ಕೆಳಪ್ರದೇಶವೊಂದರಲ್ಲಿ ವಾಸಿಸುತ್ತದೆ.
ಬಂಗಾಳದಲ್ಲಿನ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ನೆಲೆಸಿದ್ದು, ಕೆಳಮಟ್ಟದಲ್ಲಿ ಮನೆ ಇರುವ ಜನರಿಗೆ ಭಾರೀ ತೊಂದರೆಯಾಗಿದೆ. ಪಶ್ಚಿಮ ಮಿಡ್ನಾಪುರ ಜಿಲ್ಲೆಯೊಂದರಲ್ಲೇ ಸಂತ್ರಸ್ತರಿಗೆಂದು 212 ಕ್ಯಾಂಪ್‌ಗಳನ್ನು ತೆರೆಯಲಾಗಿದೆ.