ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಈ ಬಾರಿ ಮತ್ತಷ್ಟು ರಂಗೇರಲಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 291 ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಬಾರಿ ಸೆಲೆಬ್ರಿಟಿಗಳಿಗೆ ತೃಣಮೂಲ ಕಾಂಗ್ರೆಸ್ ಆದ್ಯತೆ ನೀಡಿದೆ.
ನಟಿ ಸಯೋನಿ ಘೋಷ್ರಿಂದ ಹಿಡಿದು ಮಾಜಿ ಕ್ರಿಕೆಟರ್ ಮನೋಜ್ ತಿವಾರಿ ಸೇರಿದಂತೆ ಈ ಬಾರಿ ತೃಣಮೂಲ ಕಾಂಗ್ರೆಸ್ ಅನೇಕ ಸೆಲೆಬ್ರಿಟಿಗಳಿಗೆ ಟಿಕೆಟ್ ನೀಡಿ ಎಲ್ಲರ ಗಮನ ಸೆಳೆದಿದೆ. ನಟಿ ಜೂನ್ ಮಾಲಿಯಾ ಮಿಡ್ನಾಪುರ್ ದಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಕ್ರಿಕೆಟರ್ ಮನೋಜ್ ತಿವಾರಿ ಶಿಬ್ಪುರದಿಂದ. ನಿರ್ದೇಶಕ ರಾಜ್ ಚಕ್ರವರ್ತಿ ಬರಾಕ್ಪುರದಿಂದ ಸ್ಪರ್ಧಿಸಲಿದ್ದಾರೆ. ನಟಿ ಸಯಂತಿಕಾ ಬ್ಯಾನರ್ಜಿ, ಬಂಕುರಾದಿಂದ, ನಟಿ ಕಾಂಚನ್ ಮಲಿಕ್ ಉತ್ತರಪಾಡಾದಿಂದ ಸ್ಪರ್ಧಿಸಲಿದ್ದಾರೆ. ಗಾಯಕ ಅದಿತಿ ಮುನ್ಶಿ, ರಾಜರಹತ್ ನಿಂದ ಸ್ಪರ್ಧಿಸಿದ್ರೆ, ನಟಿ ಸಯೋನಿ ಘೋಷ್ ಅಸನ್ಸೋಲ್ ಸೌತ್ ಕ್ಷೇತ್ರದಿಂದ ಸ್ಪರ್ಧೆ ನಡೆಸಲಿದ್ದಾರೆ. ನಟಿ ಕೌಶಿಕಿ ಮುಖರ್ಜಿ, ಕೃಷ್ಣನಗರ ಉತ್ತರದಿಂದ ಹಾಗೂ ನಟ ಸೋಹಮ್ ಚಕ್ರವರ್ತಿ, ಚಂಡಿಪುರದಿಂದ ಸ್ಪರ್ಧಿಸಲಿದ್ದಾರೆ.
ಈ ಬಾರಿ ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮ್ನಿಂದ ಸ್ಪರ್ಧಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಭವಾನಿಪುರದಿಂದ ಸ್ಪರ್ಧಿಸಿದ್ದರು.