ದೇಶದ ಮಧ್ಯಮವರ್ಗ ಖರ್ಚು ಮಾಡುವ ಕ್ಷಮತೆ ಹೆಚ್ಚಿಸಿಕೊಂಡಿರುವ ಬೆನ್ನಲ್ಲೇ, ಯುವಕರಲ್ಲಿ ಸ್ಪೋರ್ಟಿಂಗ್/ಸಾಹಸದ ಬೈಕಿಂಗ್ ಕ್ರೇಜ಼್ ಹೆಚ್ಚಾಗಿದೆ. ಈ ಟ್ರೆಂಡ್ ಗೆ ತಕ್ಕಂತೆ ದ್ವಿಚಕ್ರ ವಾಹನಗಳ ಉತ್ಪಾದಕರಾದ ಬಜಾಜ್, ಹೀರೋ, ಹೋಂಡಾ, ಟಿವಿಎಸ್‌ಗಳಲ್ಲದೇ ಕೆಟಿಎಂ, ಟ್ರಯಂಫ್‌ಗಳಂಥ ಬ್ರಾಂಡ್‌ಗಳು ಭಾರತದ ಮಧ್ಯಮ ವರ್ಗದ ಆದಾಯಕ್ಕನುಗುಣವಾದ ಬೆಲೆಗಳಿಗೆ ಹೊಂದುವಂತೆ ಅರೆಪ್ರೀಮಿಯಂ ಫೀಚರ್‌ಗಳಿರುವ ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿವೆ.
ಈ ರೇಸ್‌ನಲ್ಲಿ ಭಾಗಿಯಾಗಲು ಮುಂದೆ ಬಂದಿರುವ ಇಟಲಿಯ ಬೈಕ್ ಉತ್ಪಾದಕ ಬೆನೆಲ್ಲಿ ತನ್ನ ಟಿಆರ್‌ಕೆ 251 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದ್ದು, ಇದಕ್ಕಾಗಿ ಮುಂಗಡ ಬುಕಿಂಗ್ ಗವಾಕ್ಷಿ ತೆರೆದಿದೆ. ಎಂಟ್ರಿ ಮಟ್ಟದ ಸಾಹಸದ ಬೈಕ್ ಆಗಿರುವ ಟಿಆರ್‌ಕೆ 251 ಅನ್ನು 6,000 ರೂ.ಗಳ ಮುಂಗಡ ಮೊತ್ತ ಪಾವತಿಸಿ ಬುಕ್ ಮಾಡಬಹುದು. ಬೈಕ್‌ನ ಡೆಲಿವರಿಯನ್ನು ಜನವರಿಯಿಂದ ಮಾಡುವುದಾಗಿ ಬೆನೆಲ್ಲಿ ತಿಳಿಸಿದೆ.
ಜಿಯೋ ಗ್ರಾಹಕರಿಗೆ ಖುಷಿ ಸುದ್ದಿ…..! ಈ ಪ್ಲಾನ್ ನಲ್ಲಿ ಪ್ರತಿ ದಿನ ಸಿಗಲಿದೆ 1 ಜಿಬಿ ಡೇಟಾ
ಸಾಹಸಿ ಪ್ರವಾಸಿಗರಿಗೆ ಈ ಬೈಕ್ ಹೇಳಿ ಮಾಡಿಸಿದಂತಿದ್ದು, ಕೈಗೆಟುಕಬಲ್ಲ ಬೆಲೆಯಲ್ಲಿ ಇಂಥ ಬೈಕ್‌ಗಳನ್ನು ನೀಡುವ ಹೊಸ ಅಧ್ಯಾಯಕ್ಕೆ ಕಂಪನಿ ಕಾಲಿಟ್ಟಿದೆ ಎಂದು ಬೆನೆಲ್ಲಿ ಇಂಡಿಯಾದ ಎಂಡಿ ವಿಕಾಸ್ ಜ಼ಾಬಕ್ ತಿಳಿಸಿದ್ದಾರೆ.
ಬಿಳಿ, ಕಪ್ಪು ಹಾಗೂ ಕಂದು ಬಣ್ಣಗಳಲ್ಲಿ ಬೆನೆಲ್ಲಿ ಟಿಆರ್‌ಕೆ 251 ಲಭ್ಯವಿದೆ. 250ಸಿಸಿ, ಸಿಂಗಲ್ ಸಿಲಿಂಡರ್ ಇಂಜಿನ್ ಹೊಂದಿರುವ ಬೆನೆಲ್ಲಿ ಅವಳಿ-ಪಾಡ್ ಹೆಡ್‌ಲೈಟ್, 18 ಲೀಟರ್ ಇಂಧನ ಟ್ಯಾಂಕ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಎತ್ತರದ ವಿಂಡ್‌ಸ್ಕ್ರೀನ್ ಹೊಂದಿರಲಿದೆ. ಮೋನೋ ಶಾಕ್ ಸಸ್ಪೆನ್ಶನ್ ಹೊಂದಿರುವ ಟಿಆರ್‌ಕೆ 251, ಸಿಂಗಲ್ ಡಿಸ್ಕ್‌ಗಳನ್ನು ಎರಡೂ ಚಕ್ರಗಳಿಗೆ ಹೊಂದಿದ್ದು, ಸೇಫ್ಟಿ ನೆಟ್ ಅನ್ನು ಎಬಿಎಸ್‌ನಿಂದ ನಿಯಂತ್ರಿಸುವಂತೆ ಮಾಡಿದೆ.
ಶಾಲೆಯಲ್ಲೇ ನಡೆದಿದೆ ನಡೆಯಬಾರದ ಘಟನೆ: ರಾತ್ರಿ ಪ್ರಾಕ್ಟಿಕಲ್ ಎಕ್ಸಾಂ ನೆಪದಲ್ಲಿ ಕಿರುಕುಳ, ಮರುದಿನ ಮನೆಗೆ ಮರಳಿದ ಹುಡುಗಿಯರು
ಭಾರತದ ಮಾರುಕಟ್ಟೆಯಲ್ಲಿರುವ ತನ್ನ ತತ್ಸಮಾನ ಮಾಡೆಲ್‌ಗಳಾದ ಕೆಟಿಎಂ 250 ಅಡ್ವೆಂಚರ್, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮತ್ತು ಹೀರೋ ಎಕ್ಸ್‌ಪಲ್ಸ್ 2004ವಿಗಳೊಂದಿಗೆ ಬೆನೆಲ್ಲಿ ಟಿಆರ್‌ಕೆ 251 ಪೈಪೋಟಿ ನೀಡಲಿದೆ.