ಭವಿಷ್ಯ ನಿಧಿ, ದೀರ್ಘಾವಧಿಯ ಉಳಿತಾಯ ಯೋಜನೆಯಾಗಿದೆ. ಇದು ಗ್ರಾಹಕರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಪಿಎಫ್ ಖಾತೆ ಹೊಂದಿರುವ ಪ್ರತಿಯೊಬ್ಬರೂ ಇದ್ರ ಪ್ರಯೋಜನಗಳನ್ನು ತಿಳಿದಿರಬೇಕು.
ಪಿಎಫ್ ಚಂದಾದಾರರು ಇಡಿಎಲ್ಐ ಯೋಜನೆಯಡಿ ಸೇವಾ ಅವಧಿಯಲ್ಲಿ ಸಾವನ್ನಪ್ಪಿದ್ರೆ ಅವರ ಕುಟುಂಬಕ್ಕೆ 7 ಲಕ್ಷ ರೂಪಾಯಿಗಳವರೆಗೆ ಉಚಿತ ವಿಮೆಯ ಪ್ರಯೋಜನ ಸಿಗಲಿದೆ. ಮೇ ತಿಂಗಳಲ್ಲಿ ಇಡಿಎಲ್ಐ ಯೋಜನೆಯಡಿ ವಿಮಾ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ. ಗರಿಷ್ಠ ವಿಮಾ ಲಾಭದ ಮೊತ್ತವನ್ನು 6 ಲಕ್ಷ ರೂಪಾಯಿಗಳಿಂದ 7 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.
ಇಪಿಎಫ್ ಖಾತೆದಾರರಿಗೆ ಪಿಂಚಣಿ ಯೋಜನೆ 1995 ಅಡಿಯಲ್ಲಿ ಜೀವಮಾನದ ಪಿಂಚಣಿ ಯೋಜನೆಗೆ ಅರ್ಹತೆ ಸಿಗಲಿದೆ. ನೌಕರರ ಪಿಂಚಣಿ ಯೋಜನೆ 1995ರ ಅಡಿಯಲ್ಲಿ ಕನಿಷ್ಠ ಪಿಂಚಣಿ ಪ್ರತಿ ತಿಂಗಳಿಗೆ ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ.
ಗೃಹ ಸಾಲ ಮರುಪಾವತಿ, ಹೊಸ ಮನೆ ನಿರ್ಮಾಣ-ಖರೀದಿ, ಮನೆ ನವೀಕರಣ, ವೈದ್ಯಕೀಯ ತುರ್ತುಸ್ಥಿತಿ, ಮಕ್ಕಳ ಮದುವೆ ಸೇರಿದಂತೆ ಕೆಲವು ಸಂದರ್ಭಗಳಲ್ಲಿ ಪಿಎಫ್ ನ ಭಾಗಶಃ ನಿಧಿಯನ್ನು ಪಡೆಯಲು ಇಪಿಎಫ್ಒ ಒಪ್ಪಿಗೆ ನೀಡುತ್ತದೆ.
ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿ ಇಪಿಎಫ್ ಸದಸ್ಯರು, ಒಂದು ರೂಪಾಯಿ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಸಾಲ ಪಡೆದ 36 ತಿಂಗಳೊಳಗೆ ಅಲ್ಪಾವಧಿ ಹಣವನ್ನು ಮರುಪಾವತಿಸಬೇಕು.