ಹಬ್ಬದ ಋತುವಿನಲ್ಲಿ ಆನ್ಲೈನ್ ಹಾಗೂ ಆಫ್ಲೈನ್ ಎರಡರಲ್ಲೂ ಸಾಕಷ್ಟು ಆಫರ್ ಗಳಿರುತ್ತವೆ. ಕ್ರೆಡಿಟ್ ಕಾರ್ಡ್ ಬಳಸಿ, ಖರೀದಿ ಮಾಡಿದ್ರೆ ಮತ್ತಷ್ಟು ರಿಯಾಯಿತಿ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಬಳಿಯೂ ಕ್ರೆಡಿಟ್ ಕಾರ್ಡ್ ಇರುತ್ತದೆ. ಕ್ರೆಡಿಟ್ ಕಾರ್ಡ್ ಸರಿಯಾಗಿ ಬಳಸಿದ್ರೆ ಲಾಭ ಜಾಸ್ತಿ. ಆದ್ರೆ ಜನರು ಇದನ್ನು ಸರಿಯಾಗಿ ಬಳಸದೆ, ತಲೆ ಮೇಲೆ ಮತ್ತೊಂದಿಷ್ಟು ಹೊರೆ ತಂದುಕೊಳ್ಳುತ್ತಾರೆ. ಕ್ರೆಡಿಟ್ ಕಾರ್ಡ್ ನಲ್ಲಿರುವ ಲಾಭಗಳ ವಿವರ ಇಲ್ಲಿದೆ.
ಪಾಲಕರ ತಲೆಬಿಸಿಗೆ ಕಾರಣವಾಯ್ತು ಮಗನ ಲ್ಯಾಪ್ ಟಾಪ್ ನಲ್ಲಿ ಕಂಡ ವಿಷ್ಯ
ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡಿದ್ರೆ ತಕ್ಷಣವೇ ಅಷ್ಟೂ ಹಣ ಪಾವತಿ ಮಾಡಬೇಕಾಗಿಲ್ಲ. ಹಾಗೆ ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡಿದ್ರೆ ಹೆಚ್ಚಿನ ರಿಯಾಯಿತಿ ಸಿಗುತ್ತದೆ. ಜೊತೆಗೆ ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತದೆ. ಇದು ಭವಿಷ್ಯದಲ್ಲಿ ಸಾಲ ಪಡೆಯಲು ನೆರವಾಗುತ್ತದೆ.
ಅನೇಕರು ಗ್ಯಾಸ್, ನೀರು, ವಿದ್ಯುತ್ ಸೇರಿದಂತೆ ಅನೇಕ ಬಿಲ್ ಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡ್ತಾರೆ. ಈ ಬಿಲ್ ಪಾವತಿ ವೇಳೆ ಬ್ಯಾಂಕ್ ಗಳು ಕೆಲ ರಿಯಾಯಿತಿ ನೀಡುತ್ತವೆ. ಹಾಗೆ ರಿವಾರ್ಡ್ ಕೂಡ ನೀಡುತ್ತದೆ. ಈ ರಿವಾರ್ಡನ್ನು ಗ್ರಾಹಕರು ರಿಡಿಮ್ ಮಾಡಬಹುದು. ಅಂದ್ರೆ ನಗದಾಗಿ ಪರಿವರ್ತಿಸಬಹುದು.
ವರುಣನ ಅವಾಂತರಕ್ಕೆ ತತ್ತರಿಸಿದ ಅನ್ನದಾತ…..! ಮಕ್ಕಳ ಮದುವೆಗೂ ಹಣವಿಲ್ಲದೆ ಪರದಾಟ
ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ನಗದು ಪಡೆಯಬಹುದು. ಸಾಲ ಕೂಡ ಸಿಗುತ್ತದೆ. ಆದ್ರೆ ಇದನ್ನು ಅಂತಿಮ ಆಯ್ಕೆಯಾಗಿಟ್ಟುಕೊಳ್ಳುವುದು ಒಳ್ಳೆಯದು. ಯಾಕೆಂದ್ರೆ ಇದ್ರ ಬಡ್ಡಿ ಹೆಚ್ಚಿರುತ್ತದೆ.