
ಬದಲಾಗುತ್ತಿರುವ ಜೀವನಶೈಲಿ ಹಾಗೂ ಕೆಲಸದ ಒತ್ತಡ ಮನುಷ್ಯದ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಮಾನಸಿಕ ಖಾಯಿಲೆಗಳು ಈಗಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಖಿನ್ನತೆಯಿಂದ ಜನರು ಬಳಲ್ತಿದ್ದಾರೆ.
ನಿಮ್ಮ ಮಾನಸಿಕ ಸಮಸ್ಯೆ ದೈಹಿಕ ಆರೋಗ್ಯ, ಸಂತೋಷವನ್ನು ಹಾಳು ಮಾಡುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಅವಶ್ಯಕ ಎನ್ನುವವರು ಒತ್ತಡದಿಂದ ಮುಕ್ತವಾಗಿರಬೇಕು. ಒತ್ತಡ ನಿಮ್ಮನ್ನು ಕಾಡಬಾರದು ಅಂದ್ರೆ ಸಿಂಪಲ್ ಟಿಪ್ಸ್ ಫಾಲೋ ಮಾಡಿ. ಪ್ರತಿ ದಿನ ʼಓಂʼ ಉಚ್ಚಾರ ಮಾಡಿ.
ಸರಿಯಾದ ಕ್ರಮದಲ್ಲಿ ಓಂ ಉಚ್ಛಾರಣೆ ಮಾಡುವುದು ಬಹಳ ಮುಖ್ಯ. ಓಂ ಉಚ್ಚಾರಣೆ ಬಗ್ಗೆ ತರಬೇತಿ ಪಡೆದು ಮಾಡಿದ್ರೆ ಪರಿಣಾಮ ಹೆಚ್ಚು. ಓಂ ಪಠಣ ಮಾಡೋದ್ರಿಂದ ಮನಸ್ಸು ಶಾಂತಗೊಳ್ಳುತ್ತದೆ. ನಿದ್ರಾಹೀನತೆ ಸಮಸ್ಯೆಗೆ ಮುಕ್ತ ಸಿಗುತ್ತದೆ. ಭಾವನೆಗಳ ನಿಯಂತ್ರಣ ಇದ್ರಿಂದ ಸಾಧ್ಯ. ಒತ್ತಡ ಕಡಿಮೆ ಆಗುವ ಜೊತೆಗೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ನಕಾರಾತ್ಮಕತೆ ದೂರವಾಗಿ, ಸಂತೋಷ ಮನೆ ಮಾಡುತ್ತದೆ, ರಕ್ತದೊತ್ತಡ ನಿಯಂತ್ರಣಕ್ಕೆ ಓಂ ಪಠಣ ಒಳ್ಳೆಯದು.
ಓಂ ಪಠಣ ಮಾಡುವಾಗ ಶಾಂತ ಸ್ಥಳದಲ್ಲಿ ಕುಳಿತುಕೊಳ್ಳುವುದ ಮುಖ್ಯ. ಅ, ಉ ಮತ್ತು ಮ ಅಕ್ಷರದಿಂದ ಓಂ ಹುಟ್ಟಿಕೊಂಡಿದ್ದು ಅದನ್ನು ಅರಿಯಾಗಿ ಉಚ್ಚರಿಸಿದಾಗ ಲಾಭ ಹೆಚ್ಚು. ಓಂ ಉಚ್ಚಾರ ಮಾಡುವಾಗ ಉಸಿರಾಟದ ಮೇಲೂ ಗಮನ ಹರಿಸಬೇಕು. 21 ಬಾರಿ ಓಂ ಉಚ್ಚಾರ ಮಾಡಬೇಕು.