ಅಡುಗೆಯ ಪರಿಮಳ ಹೆಚ್ಚಿಸಲು ಬಳಸುವ ಇಂಗು ದೇಹದ ಅನೇಕ ಸಮಸ್ಯೆಗಳಿಗೆ ದಿವ್ಯೌಷಧ. ಇದರಿಂದ ಅಜೀರ್ಣ, ಕರುಳಿನ ಸಮಸ್ಯೆ ಮುಂತಾದವುಗಳಿಂದ ಮುಕ್ತಿ ಸಿಗುತ್ತದೆ. ಇದೇ ಅಲ್ಲದೇ ಇಂಗು ಇನ್ನೂ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ.
ಹೊಟ್ಟೆಯಲ್ಲಿ ನೋವಿದ್ದರೆ ಸ್ವಲ್ಪ ಇಂಗನ್ನು ತೆಗೆದುಕೊಂಡು ಅದಕ್ಕೆ ಬಿಸಿಯಾದ ಸಾಸಿವೆ ಎಣ್ಣೆ, ಆಲಿವ್ ಎಣ್ಣೆಯ ಕೆಲ ಹನಿಗಳನ್ನು ಹಾಕಿ ಹೊಕ್ಕಳಿಗೆ ಹಚ್ಚಬೇಕು. ಅರ್ಧ ಚಮಚ ಇಂಗಿಗೆ ಸ್ವಲ್ಪ ನೀರನ್ನು ಸೇರಿಸಿ ಪೇಸ್ಟ್ ತರಹ ಮಾಡಿಕೊಳ್ಳಬೇಕು. ಈ ಪೇಸ್ಟನ್ನು ಮಗುವಿನ ಹೊಕ್ಕಳ ನಾಲ್ಕು ದಿಕ್ಕಿಗೂ ಹಚ್ಚಿ ಅದು ಒಣಗಲು ಬಿಡಬೇಕು. ಪೇಸ್ಟ್ ಹೊಕ್ಕಳಿಗೆ ತಾಗದಿರುವಂತೆ ಎಚ್ಚರ ವಹಿಸಬೇಕು. ಪೇಸ್ಟ್ ಹಚ್ಚುವಾಗ ಒಂದು ಕಾಟನ್ ಬಟ್ಟೆ ಅಥವಾ ಹತ್ತಿ ಬಳಸಬೇಕು.
ಪವರ್ ಸ್ಟಾರ್ ಪುನೀತ್ ಗೆ ‘ಕರ್ನಾಟಕ ರತ್ನ’: ಸಿಎಂ ಬಸವರಾಜ ಬೊಮ್ಮಾಯಿ ಮುಖ್ಯ ಮಾಹಿತಿ
ಪೇಸ್ಟ್ ಒಣಗಿದ ನಂತರ ಮಗುವಿಗೆ ತೇಗಲು ಹೇಳಬೇಕು. ಇದು ಗ್ಯಾಸ್ ನಿಂದ ಆರಾಮ ಸಿಗುತ್ತದೆ. ಹೊಟ್ಟೆ ನೋವು ಕಡಿಮೆ ಆಗಲು ಸ್ವಲ್ಪ ಸಮಯ ತಗಲುತ್ತದೆ. ನೋವು ಕಡಿಮೆಯಾದ ಮೇಲೆ ಒದ್ದೆ ಬಟ್ಟೆಯಿಂದ ಹೊಕ್ಕಳನ್ನು ಒರೆಸಬೇಕು.
ಇಂಗು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಬಿಸಿ ನೀರಿಗೆ ಅರ್ಧ ಚಮಚ ಇಂಗನ್ನು ಹಾಕಿ ಕುಡಿಯುವುದರಿಂದ ಹೊಟ್ಟೆ ನೋವು, ಗ್ಯಾಸ್ ಸಮಸ್ಯೆ ದೂರವಾಗುತ್ತದೆ.