ಪ್ರತಿಯೊಬ್ಬರ ಜೀವನ ಒಂದೇ ರೀತಿ ಇರಲು ಸಾಧ್ಯವಿಲ್ಲ. ಅನೇಕ ಕಾರಣಕ್ಕೆ ಜನರು ಲೈಂಗಿಕ ಸಂಬಂಧದಿಂದ ದೂರವಿರ್ತಾರೆ. ಆದ್ರೆ ದೀರ್ಘಕಾಲ ಶಾರೀರಿಕ ಸಂಬಂಧ ಬೆಳೆಸದೆ ಹೋದ್ರೆ ಕೆಲ ಸಮಸ್ಯೆ ಕಾಡುತ್ತದೆ.
ದೈಹಿಕ ಸಂಪರ್ಕದ ಕೊರತೆಯು, ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಅನೇಕ ಸೋಂಕುಗಳು ಮತ್ತು ಜ್ವರ ಬೇಗ ಕಾಡುತ್ತದೆ. ನಿಯಮಿತ ಲೈಂಗಿಕ ಸಂಬಂಧಗಳನ್ನು ಹೊಂದಿರುವ ಜನರು ತಮ್ಮ ಲಾಲಾರಸದಲ್ಲಿ ಸೋಂಕು-ನಿರೋಧಕ ಪ್ರತಿಕಾಯಗಳನ್ನು ಹೊಂದಿರುತ್ತಾರೆ ಎಂಬುದು ಕಂಡು ಬಂದಿದೆ.
ವಿಜಯೇಂದ್ರಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಬೆಂಬಲಿಗನಿಂದ ದುಡುಕಿನ ನಿರ್ಧಾರ
ದೈಹಿಕ ಸಂಬಂಧದ ಕೊರತೆಯಿಂದಾಗಿ, ಮಹಿಳೆಯರ ಜನನಾಂಗದ ಆರೋಗ್ಯವು ಕ್ಷೀಣಿಸಬಹುದು. ರಕ್ತದ ಹರಿವಿಗೆ ತೊಂದರೆಯಾಗಬಹುದು. ಮುಂದಿನ ಬಾರಿ ದೈಹಿಕ ಸಂಬಂಧ ಬೆಳೆಸುವಾಗ ಲೈಂಗಿಕ ಪ್ರಚೋದನೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ.
ನಿಯಮಿತ ದೈಹಿಕ ಸಂಬಂಧವನ್ನು ಹೊಂದಿಲ್ಲದಿದ್ದರೆ ಹೃದಯ ರೋಗಗಳ ಅಪಾಯವು ಹೆಚ್ಚಾಗಬಹುದು. ಲೈಂಗಿಕ ಸಂಬಂಧ ದೇಹಕ್ಕೆ ವ್ಯಾಯಾಮ ನೀಡುತ್ತದೆ. ಇದು ದೇಹದಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದರಿಂದಾಗಿ ಹೃದಯ ರೋಗಗಳ ಅಪಾಯ ಕಡಿಮೆಯಾಗುತ್ತದೆ.
ಸಂಭೋಗದ ಕೊರತೆಯಿಂದಾಗಿ ಮುಟ್ಟಿನ ಸಮಯದಲ್ಲಿ ಮಹಿಳೆಯರಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಸಂಭೋಗದ ಸಮಯದಲ್ಲಿ ಎಂಡಾರ್ಫಿನ್ ಹಾರ್ಮೋನುಗಳು ಮಹಿಳೆಯರಲ್ಲಿ ಹೆಚ್ಚಾಗುತ್ತವೆ. ಗರ್ಭಾಶಯದ ಸಂಕೋಚನವು ಹೆಚ್ಚಾಗುತ್ತದೆ. ಎರಡೂ ಕಾರಣ ಮುಟ್ಟಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ದೀರ್ಘಕಾಲದವರೆಗೆ ದೈಹಿಕ ಸಂಬಂಧಗಳನ್ನು ಹೊಂದಿಲ್ಲದಿದ್ದರೆ, ಲೈಂಗಿಕ ಬಯಕೆ ಕಡಿಮೆಯಾಗಬಹುದು. ನಿಯಮಿತ ಲೈಂಗಿಕತೆಯು, ಲೈಂಗಿಕ ಬಯಕೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ನಿಯಮಿತ ದೈಹಿಕ ಸಂಬಂಧದ ಕೊರತೆ, ಸಂಗಾತಿಯೊಂದಿಗಿನ ಸಂಬಂಧದ ಮೇಲೂ ಪರಿಣಾಮ ಬೀರುತ್ತದೆ. ಇದು ಪರಸ್ಪರ ಹೊಂದಾಣಿಕೆಯನ್ನು ಹೆಚ್ಚು ಅವಲಂಬಿಸಿರುತ್ತದೆ.