ಭಾರೀ ವಿರೋಧದ ಬಳಿಕ ಹೋಳಿ ಆಚರಣೆ ನಿಷೇಧ ಆದೇಶ ಹಿಂಪಡೆದ BHU 05-03-2023 9:02AM IST / No Comments / Posted In: Latest News, India, Live News ಭಾರೀ ವಿರೋಧದ ಬಳಿಕ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ( BHU) ವು ಕ್ಯಾಂಪಸ್ನಲ್ಲಿ ಹೋಳಿ ಆಚರಣೆಯನ್ನು ನಿಷೇಧಿಸುವ ಆದೇಶವನ್ನು ಹಿಂಪಡೆದಿದೆ. BHU ನ ಮುಖ್ಯ ಪ್ರಾಕ್ಟರ್ ಹೊರಡಿಸಿದ ಆದೇಶದಲ್ಲಿ, ವಿಶ್ವವಿದ್ಯಾನಿಲಯವು ಹೋಳಿ ಆಚರಿಸಲು ಸಾರ್ವಜನಿಕ ಸ್ಥಳದಲ್ಲಿ ಸೇರುವ ಬಗ್ಗೆ 28.02.2023 ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದೆ. ಪ್ರತಿಯೊಬ್ಬರೂ ಸೌಹಾರ್ದಯುತ ವಾತಾವರಣದಲ್ಲಿ ಬಣ್ಣಗಳ ಹಬ್ಬವನ್ನು ಗೌರವದಿಂದ ಆಚರಿಸಲು ನಿರೀಕ್ಷಿಸಲಾಗಿದೆ ಎಂದಿದೆ. ಫೆಬ್ರವರಿ 28 ರಂದು, BHU ನ ಮುಖ್ಯ ಪ್ರಾಕ್ಟರ್ ಅವರು ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹೋಳಿ ಆಡುವುದು ಅಥವಾ ಸಂಗೀತ ನುಡಿಸುವುದನ್ನು ನಿಷೇಧಿಸಲಾಗಿದೆ ಮತ್ತು ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಬಣ್ಣದ ಹಬ್ಬ ಆಚರಣೆಗೆ ಕಡಿವಾಣ ಹಾಕಿ ಆದೇಶ ಹೊರಡಿಸಿದ್ದಕ್ಕೆ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆಕ್ರೋಶಕ್ಕೆ ಗುರಿಯಾಗಿತ್ತು. ವಿಶ್ವ ಹಿಂದೂ ಪರಿಷತ್ ಕೂಡ ಈ ಆದೇಶವನ್ನು ಖಂಡಿಸಿತ್ತು. Glimpses of students immersed in the colours of joy and exuberance as they play #Holi!#CampusLife #BHU #HoliInBHU #Holi2023 #BHUCampus #BanarasHinduUniversity #HappyHoli @VCofficeBHU @registrarbhu pic.twitter.com/xoKK3V2Ofb — BHU Official (@bhupro) March 4, 2023 ये परिपत्र है या कोई तुगलकी फरमान…!!कहीं ये विश्व विद्यालय के नाम से "हिन्दू" शब्द हटाने कि शुरुआत तो नहीं…!! pic.twitter.com/D3SK9Aa9Dq — विनोद बंसल Vinod Bansal (@vinod_bansal) March 3, 2023