ಯಾವುದಾದರೂ ಮನೆಯಲ್ಲಿ ಸಾವು ಸಂಭವಿಸಿದರೆ ಅಲ್ಲಿ ನೀರವ ಮೌನ ಆವರಿಸಿರುತ್ತದೆ. ಎಲ್ಲರೂ ದುಃಖತಪ್ತರಾಗಿರುತ್ತಾರೆ, ಕೆಲವರು ರೋಧಿಸಿದರೆ, ಮತ್ತೆ ಕೆಲವರು ಮೌನದಿಂದಲೇ ದುಃಖವನ್ನು ತೋಡಿಕೊಳ್ಳುತ್ತಾರೆ.
ನಮ್ಮ ದೇಶದ ಕೆಲವು ಪ್ರದೇಶಗಳಲ್ಲಿ ಸಾವಿನ ಮನೆಯಲ್ಲಿ ಅಳಲೆಂದೇ ಬಾಡಿಗೆ `ಅಳು’ವವರನ್ನು ಕರೆಸಲಾಗುತ್ತದೆ. ಇನ್ನು ಕೆಲವು ಸಂಪ್ರದಾಯಗಳಲ್ಲಿ ಪಟಾಕಿ ಹಚ್ಚಿ ದುಃಖವನ್ನು ತೋಡಿಕೊಳ್ಳಲಾಗುತ್ತದೆ.
ಆದರೆ, ಇಲ್ಲೊಂದು ವಿಲಕ್ಷಣ ಘಟನೆಗೆ ಈ ವಿಡಿಯೋ ಸಾಕ್ಷಿಯಾಗಿದೆ. ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಮನೆಯಲ್ಲಿ ಮಹಿಳೆ ಸಖತ್ ಬೆಲ್ಲಿ ಡ್ಯಾನ್ಸ್ ಮಾಡಿ ಎಲ್ಲರೂ ನಿಬ್ಬೆರರಾಗುವಂತೆ ಮಾಡಿದ್ದಾಳೆ.
ದನಗಳ್ಳರಿಂದ ಆಘಾತಕಾರಿ ಕೃತ್ಯ: ಎಸ್ಐ ಮೇಲೆ ವಾಹನ ಹರಿಸಲು ಯತ್ನ
ಸಾವನ್ನಪ್ಪಿದ ವ್ಯಕ್ತಿಯ ಅಂತ್ಯಕ್ರಿಯೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿರುತ್ತದೆ. ಈ ಸಂದರ್ಭದಲ್ಲಿ ಮಹಿಳೆಯು ಸಲ್ಮಾನ್ ಖಾನ್ ನಟನೆಯ ವಾಂಟೆಡ್ ಚಿತ್ರದ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದಾಳೆ. ಇದಕ್ಕೆ ತಕ್ಕಂತೆ, ಅಂತ್ಯಕ್ರಿಯೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಂದವರು ದುಃಖವನ್ನು ಬದಿಗಿಟ್ಟು ಆಕೆಯ ಡ್ಯಾನ್ಸ್ ಅನ್ನು ಎಂಜಾಯ್ ಮಾಡುತ್ತಿರುವ ದೃಶ್ಯಗಳು ಈ ವಿಡಿಯೋ ತುಣುಕಿನಲ್ಲಿವೆ.
ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಆದರೆ, ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ ತುಣುಕಿಗೆ “ಅವರಿಗೆಲ್ಲಾ ಸಂತೋಷವಾಗಿದೆಯೇ ಅಥವಾ ದುಃಖವಾಗಿದೆಯೇ?’’ ಎಂಬ ಪ್ರಶ್ನೆಯೊಂದಿಗೆ ಶೀರ್ಷಿಕೆ ನೀಡಲಾಗಿದೆ.
ಇದು ಇನ್ ಸ್ಟಾಗ್ರಾಂನ ನಲ್ಲಿ ಹಂಚಿಕೆಯಾಗುತ್ತಿದ್ದಂತೆಯೇ ವಿಶ್ವದಾದ್ಯಂತ ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ ಮತ್ತು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ.
ಸಾಮಾನ್ಯವಾಗಿ ತಮ್ಮ ಪ್ರೀತಿ ಪಾತ್ರರು ಸಾವನ್ನಪ್ಪಿದರೆ ಜನರು ಸಂತಾಪ ಸೂಚಿಸುತ್ತಾರೆ. ಅವರೆಲ್ಲಾ ತಮ್ಮನ್ನು ಅಗಲಿದ ವ್ಯಕ್ತಿಗೆ ದುಃಖತಪ್ತ ವಿದಾಯ ಹೇಳುತ್ತಾರೆ. ಆದರೆ, ಈ ವಿಡಿಯೋ ಇವೆಲ್ಲಕ್ಕಿಂತ ವಿರುದ್ಧವಾಗಿದೆ. ಅಂದಹಾಗೆ, ಬೆಲ್ಲಿ ಡ್ಯಾನ್ಸ್ ಮಾಡುವ ಮೂಲಕ ಸಾವನ್ನಪ್ಪಿದ ವ್ಯಕ್ತಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.