
ಬಾಲಿವುಡ್ ನಟಿ ವಾಣಿ ಕಪೂರ್, ಬೆಲ್ ಬಾಟಮ್ ಚಿತ್ರದಲ್ಲಿ ಅದ್ಭುತ ನಟನೆ ಮಾಡಿದ್ದಾರೆ. ವಾಣಿ ಕಪೂರ್, ಈ ಚಿತ್ರದ ಮೂಲಕ ಅನೇಕರ ಮನ ಗೆದ್ದಿದ್ದಾರೆ. ಆಗಸ್ಟ್ 23 ರಂದು ವಾಣಿ 33 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಸ್ಥಾನ ಪಡೆಯಲು ವಾಣಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಕೊನೆಯಲ್ಲಿ ವಾಣಿಗೆ ಯಶಸ್ಸು ಸಿಕ್ಕಿದೆ.
ವಾಣಿ ಕಪೂರ್, ಚಲನಚಿತ್ರ ಹಿನ್ನೆಲೆಯಿಂದ ಬಂದವರಲ್ಲ. ಅವರ ತಾಯಿ ಶಿಕ್ಷಕಿ. ತಂದೆ ಪೀಠೋಪಕರಣ ಉದ್ಯಮಿ. ವಾಣಿ ಕಪೂರ್ ಕುಟುಂಬದಲ್ಲಿ, ಯಾರಿಗೂ ಚಲನಚಿತ್ರಗಳೊಂದಿಗೆ ಸಂಬಂಧವಿಲ್ಲ. ಪ್ರವಾಸೋದ್ಯಮ ವಿಷ್ಯವನ್ನು ವಿದ್ಯಾಭ್ಯಾಸ ಮಾಡಿದ್ದ ವಾಣಿ, ಹೊಟೇಲ್ ನಲ್ಲಿ ಕೆಲಸ ಮಾಡ್ತಿದ್ದರು.
ವಾಣಿ ಜೈಪುರದ ಒಬೆರಾಯ್ ಹೋಟೆಲ್‌ನಲ್ಲಿ ಇಂಟರ್ನ್‌ಶಿಪ್ ಮಾಡಿದ್ದರು. ಇದಲ್ಲದೇ, ಅವರು ಐಟಿಸಿ ಹೋಟೆಲ್‌ನಲ್ಲಿ ಕೆಲಸ ಮಾಡಿದ್ದಾರೆ. ಇಂಟರ್ನ್‌ಶಿಪ್ ಸಮಯದಲ್ಲಿ, ಯಾವುದೇ ಇಂಟರ್ನಿನ್ ಮಾಡಬೇಕಾದ ಎಲ್ಲ ಕೆಲಸಗಳನ್ನು ವಾಣಿ ಮಾಡುತ್ತಿದ್ದರು.
ನಂತರ ವಾಣಿ, ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಅಲ್ಲಿಂದ ಮನರಂಜನಾ ಕ್ಷೇತ್ರಕ್ಕೆ ಬಂದ್ರು. ವಾಣಿ ಕಪೂರ್, ಸುಶಾಂತ್ ಸಿಂಗ್ ರಜಪೂತ್ ಜೊತೆ ಮೊದಲ ಚಿತ್ರದಲ್ಲಿ ನಟಿಸಿದ್ದರು.