ಬಳ್ಳಾರಿ: ಬಳ್ಳಾರಿಯ ಕೆಎಂಎಫ್ ಕಚೇರಿ ಮುಂದೆಯೇ ವಾಮಾಚಾರ ನಡೆಸಿರುವ ಘಟನೆ ನಡೆದಿದೆ. ಕೆಎಂಎಫ್ ಆಡಳಿತ ಕಚೇರಿ ಮುಂಭಾಗವೇ ನಿಂಬೆಹಣ್ಣು, ಕುಂಕುಮ, ಕುಂಬಳಕಾಯಿ, ಮಣ್ಣಿನ ಮಡಿಕೆ ಮೊದಲಾದ ವಸ್ತುಗಳನ್ನು ಇಟ್ಟು ಮಾಟ-ಮಂತ್ರ ಮಾಡಲಾಗಿದೆ.
ಈಗಾಗಲೇ ನಷ್ಟದ ಸಮಸ್ಯೆಗೆ ಸಿಲುಕಿರುವ ಬಳ್ಳಾರಿ ಕೆಎಂಎಫ್ ನಲ್ಲಿ ಆಂತರಿಕ ಕಲಹ ಶುರುವಾಗಿದೆ. ಈ ನಡುವೆಯೇ ಕೆಎಂಎಫ್ ಕಚೇರಿ ಮುಂಭಾಗ ವಾಮಾಚರದ ಘಟನೆ ನಡೆದಿದ್ದು, ಆಂತರಿಕ ವೈಮನಸ್ಸು ಇದ್ದವರೇ ಹೀಗೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಚೇರಿ ಮುಂಬಾಗ ಮಣ್ಣಿನ ಮಡಿಕೆ, ತಾಯತ, ಗೊಂಬೆ, 8 ನಿಂಬೆಹಣ್ಣು, ಕುಂಬಳ ಕಾಯಿಗೆ ಬಣ್ಣದ ದಾರ ಕಟ್ಟಿ ಮಾಟ-ಮಂತ್ರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.