alex Certify SHOCKING NEWS: ಕುಡಿಯುವ ನೀರಿನ ಟ್ಯಾಂಕ್ ಕಟ್ಟೆಯ ಮೇಲೆ ವಾಮಾಚಾರ: ತಲೆ ಬುರುಡೆ, ಮೂಳೆ ಇಟ್ಟು ಮಾಟ-ಮಂತ್ರ: ಬೆಚ್ಚಿಬಿದ್ದ ಜನರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಕುಡಿಯುವ ನೀರಿನ ಟ್ಯಾಂಕ್ ಕಟ್ಟೆಯ ಮೇಲೆ ವಾಮಾಚಾರ: ತಲೆ ಬುರುಡೆ, ಮೂಳೆ ಇಟ್ಟು ಮಾಟ-ಮಂತ್ರ: ಬೆಚ್ಚಿಬಿದ್ದ ಜನರು

ಬಳ್ಳಾರಿ: ಕುಡಿಯುವ ನೀರಿನ ಟ್ಯಾಂಕ್ ಕಟ್ಟೆಯ ಮೇಲೆ ವಾಮಾಚಾರ ಮಾಡಿ, ಮಾಟ ಮಂತ್ರ ಮಾಡಿರುವ ಘಟನೆ ಬೆಳ್ಳಾರಿ ನಗರದ ಮಾರ್ಕಾಂಡೇಯ ಕಾಲೋನಿಯಲ್ಲಿ ನಡೆದಿದೆ.

ಮಾರ್ಕಾಂಡೆಯ ಕಾಲೋನಿಯಲ್ಲಿರುವ ಕುಡಿಯುವ ನೀರಿನ ಕಟ್ಟೆಯ ಮೇಲೆ -4 ತಲೆ ಬುರುಡೆ, ಮೂಳೆ, ದೀಪ, ಕುಂಕುಮ ಇಟ್ಟು, ಕೂದಲನ್ನು ಸುಟ್ಟು ಮಾಟ-ಮಂತ್ರ ಮಾಡಿಸಿದ್ದಾರೆ. ನೀರಿನ ಟ್ಯಾಂಕ್ ಬಳಿ ಎಳ್ಳಮವಾಸ್ಯೆ ದಿನ ಈ ರೀತಿ ವಾಮಾಚಾರ ಮಾಡಿರುವುದನ್ನು ಕಂಡು ಕಾಲೋನಿ ಜನರು, ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬ್ರೂಸ್ ಪೇಟೆ ಪೊಲೀಸರು ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕೇಸ್ ದಾಖಲಿಸಿ, ಸಿಸಿಟಿವಿ ಪರಿಶೀಲನೆ ನಡೆಸಿ, ತನಿಖೆ ನಡೆಸುವಂತೆ ಎಸ್ ಪಿ ಶೋಭಾ ರಾಣಿ ಸೂಚನೆ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...