ಗುಜರಾತ್ನ ಹಿರಿಯರೊಬ್ಬರು ತಮ್ಮ 85 ನೇ ವಯಸ್ಸಿನಲ್ಲಿ ಮೊದಲ ಕಾರನ್ನು ಖರೀದಿಸಿದ್ದಾರೆ. ಇದರಲ್ಲಿ ಅಂಥದ್ದೇನು ಸ್ವಾರಸ್ಯವಿದೆ ಎಂದಿರಾ, ಅವರು ಆಯುರ್ವೇದ ಉತ್ಪನ್ನಗಳ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿ ತಮ್ಮ ಕನಸನ್ನು ಈಗ ನನಸಾಗಿಸಿಕೊಂಡಿದ್ದಾರೆ.
ನಾನಾಜಿ ಎಂದೇ ಖ್ಯಾತರಾಗಿರುವ ರಾಧಾ ಕ್ರಿಶನ್ ಚೌಧರಿ ಅವಿಮೀ ಹರ್ಬಲ್ ಎಂಬ ಆಯುರ್ವೇದ ಕಂಪನಿಯನ್ನು ಆರಂಭಿಸಿದ್ದರು. ಆ ಆಯುರ್ವೇದ ಕಂಪನಿಯ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ ಅವರ ಸಂರ್ಪೂಣ ಕಥೆಯನ್ನು ವಿವರಿಸುವ ರೀಲ್ ಅನ್ನು ಹಂಚಿಕೊಂಡಿದೆ.
ಅಪ್ಲೋಡ್ ಮಾಡಿದ ನಂತರ, ಆ ವಿಡಿಯೊ ಲಕ್ಷಾಂತರ ಲೈಕ್ ಗಳಿಸಿತು. ನೂರಾರು ಅಭಿನಂದನೆಗಳು, ಹಾರೈಕೆಯ ಕಾಮೆಂಟ್ ಬಂದಿವೆ. ಹೊಸ ಕಾರಿಗೆ ಪೂಜೆ ನೆರವೇರಿಸುವುದು ಕಾಣಿಸುತ್ತದೆ. ಆದರೆ, ವಿಡಿಯೋ ಜತೆಗಿನ ಶೀರ್ಷಿಕೆ ಓದಿ ಎಂದು ಕೋರಲಾಗಿದೆ.
ಮತ್ತೆ ಸಿಕ್ತು ಜನಸಂದಣಿಯಲ್ಲಿ ಕಳೆದು ಹೋದ ಯುವತಿ ಮೊಬೈಲ್…!
ಅದರಲ್ಲಿ ಕಂಪನಿಯ ವಿಷನ್, ನಂಬಿಕೆ, ಹಾರ್ಡ್ ವರ್ಕ್, ಟೀಮ್ ವರ್ಕ್ ಬಗ್ಗೆ ತಿಳಿಸಲಾಗಿದೆ. “ಆಯುರ್ವೇದದ ಮೂಲಕ ಜನರಿಗೆ ತಮ್ಮ ಕೂದಲನ್ನು ಮತ್ತೆ ಬೆಳೆಯಲು ಸಹಾಯ ಮಾಡುವ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಮಿಷನ್ ಹೊಂದಿದ್ದೆವು’ ಎಂದು ಅವರು ಹೇಳಿಕೊಂಡಿದ್ದಾರೆ. ಕಠಿಣ ಪರಿಶ್ರಮಕ್ಕೆ ಯಾವುದೇ ಬದಲಿ ಇಲ್ಲ ಎಂದು ಸಹ ಪ್ರಸ್ತಾಪಿಸಿದ್ದಾರೆ.
ಯಶಸ್ಸನ್ನು ಸಾಧಿಸಲು ನಮಗೆ 25 ವರ್ಷಗಳು ಬೇಕಾಯಿತು. ನಾವು ಏನು ಮಾಡುತ್ತಿದ್ದೇವೆ ಎಂಬುದು ನಮಗೆ ತಿಳಿದಿತ್ತು ಮತ್ತು ಅದು ನಮ್ಮನ್ನು ಪ್ರೇರೇಪಿಸಿತು, ತಂಡದ ಕೆಲಸದ ಶಕ್ತಿಯನ್ನು ಕಡಿಮೆ ಅಂದಾಜು ಮಾಡಬೇಡಿ. ಆರಂಭದ ದಿನಗಳಲ್ಲಿ ನನ್ನ ಕುಟುಂಬದವರೆಲ್ಲರೂ ನನಗೆ ಸಹಾಯ ಮಾಡಲು ಒಗ್ಗೂಡಿದರು. ಅವರಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.