
ಬೆಳಗಾವಿ: ಸೇತುವೆ ಮೇಲೆ ಬೈಕ್ ಸ್ಕಿಡ್ ಆಗಿ ನದಿಗೆ ಬಿದ್ದು ದಂಪತಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೊಗನಿಹಾಳ ಗ್ರಾಮದಲ್ಲಿ ನಡೆದಿದೆ.
ಸೇತುವೆ ದಾಟುವಾಗ ಬೈಕ್ ಸ್ಕಿಡ್ ಆಗಿ ಬೈಕ್ ಸಮೇತ ದಂಪತಿ ನದಿಗೆ ಬಿದ್ದಿದ್ದಾರೆ. ಸುರೇಶ್ ಬಡಿಗೇರ (53) ಹಾಗೂ ಪತ್ನಿ ಜಯಶ್ರೀ ಬಡಿಗೇರ (45) ಮೃತ ದಂಪತಿ.
ಘಟಪ್ರಭಾ ನದಿಯಿಂದ ಮೃತ ಜಯಶ್ರೀ ಮೃತದೇಹ ಹೊರತೆಗೆಯಲಾಗಿದ್ದು, ಜಯಶ್ರೀ ಪತಿ ಸುರೇಶ್ ಗಾಗಿ ನದಿಯಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಸೇತುವೆಗೆ ತಡೆಗೋಡೆ ಇಲ್ಲದಿರುವುದೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಹಲವುಬಾರಿ ತಡೆಗೋಡೆ ನಿರ್ಮಾಣ ಮಡುವಂತೆ ಒತ್ತಾಯಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.