ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಗೆ ಧಾರವಾಡ ಹೈಕೋರ್ಟ್ ಪೀಠ ಬಿಗ್ ಶಾಕ್ ನೀಡಿದೆ. 20 ಕೋಟಿ ಪರಿಹಾರದ ಮೊತ್ತದ ಠೇವಣಿ ಇಡುವಂತೆ ಆದೇಶ ನೀಡಿದೆ.
ರಸ್ತೆ ಕಾಮಗಾರಿ, ಭೂಸ್ವಾಧೀನ ವಿಚಾದದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳ ಎಡವಟ್ಟು ಹಿನ್ನೆಲೆಯಲ್ಲಿ ಭಾರಿ ಮೊತ್ತದ ಪರುಇಹಾರ ಠೇವಣಿ ಇಡುವಂತೆ ಕೋರ್ಟ್ ಆದೇಶ ನೀಡಿದೆ.
2021ರಲ್ಲಿ ಬೆಳಗಾವಿ ನಗರದಲ್ಲಿ ನಡೆದಿದ್ದ ರಸ್ತೆ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಎಡವಟ್ಟು ಮಾಡಿದ್ದರು. ಶಿವಾಜಿ ಗಾರ್ಡ್ ನಿಂದ ಓಲ್ಡ್ ಪಿಬಿ ರಸ್ತೆವರೆಗೆ ಬೆಳಗವೈ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆದಿದ್ದ ಕಾಮಗಾರಿಯಲ್ಲಿ ಅಧಿಕಾರಿಗಳು ಅಕ್ರಮವೆಸಗಿದ್ದರು. ರಸ್ತೆ ಅಗಲೀಕರಣಕ್ಕೆ ನಡೆದಿದ್ದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪರಿಹಾರ ನೀಡುವ ವಿಚರದಲ್ಲಿ ಅಂದಿನ ಪಾಲಿಕೆ ಅಧಿಕಾರಿಗಳು ಬೇಜವಾಬ್ದಾರಿ ಮೆರೆದಿದ್ದರು. ಭೂಮಿ ಕಳೆದುಕೊಂಡವರು ಧರವಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಗೆಗೆ ಪರಿಹಾರದ ಮೊತ್ತದ ಠೇವಣಿ 20 ಕೋಟಿ ರೂಪಾಯಿ ಇಡುವಂತೆ ಕೋರ್ಟ್ ಆದೇಶ ನೀಡಿದೆ.