
ಬೆಳಗಾವಿ: ದರ್ಗಾ ಬಳಿ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿ ಬಳಿ ನಡೆದಿದೆ. ಏಕಾಏಕಿ ಸಂಭವಿಸಿದ ಸ್ಫೋಟಕ್ಕೆ ಜನರು ಭಯಭೀತರಾಗಿದ್ದಾರೆ.
ಉದಯ್ ಶಿವಕುಮಾರ್ ಎಂಬುವವರ ಕ್ರಷರ್ ನಲ್ಲಿ ಈ ಘಟನೆ ನಡೆದಿದೆ. ಕ್ರಷರ್ ಬಳಿ ಇರುವ ಗುಡ್ಡಕ್ಕೆ ಸ್ಥಳೀಯರು ಬೆಂಕಿ ಹಚ್ಚಿದ್ದರು. ಬೆಂಕಿಯ ಕಿಡಿ ಕ್ರಷರ್ ಶೆಡ್ ಗೆ ತಗುಲಿ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿವೆ.
ಘಟನಾ ಸ್ಥಳಕ್ಕೆ ಹಿರೇಬಾಗೇವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.