
ಬೆಳಗಾವಿ: ಎತ್ತಿನ ಬಂಡಿ ಹರಿದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಬಸವನ ಕುಡುಚಿ ಗ್ರಾಮದಲ್ಲಿ ನಡೆದಿದೆ.
27 ವರ್ಷದ ಅಪ್ಪಣ್ಣ ಪಾಟೀಲ್ ಮೃತ ದುರ್ದೈವಿ. ಎರಡು ದಿನಗಳ ಹಿಂದೆ ಬಸವಣ್ಣನ ಜಾತ್ರೆಯಲ್ಲಿ ಯುವಕನ ಮೇಲೆ ಎತ್ತಿನ ಬಂಡಿ ಹರಿದಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಾವು-ಬದುಕಿನ ನಡುವೆ ಹೋರಟ ನಡೆಸಿದ್ದ ಯುವಕ ಇಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.