ಬೆಳಗಾವಿ: ಹುಟ್ಟಿದ ಶಿಶುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಬಾಣಂತಿ ತಾಯಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲಾಸ್ಪತ್ರೆ ಬಿಮ್ಸ್ ನಲ್ಲಿ ನಡೆದಿದೆ. ಪರಿಣಾಮ ನವಜಾತ ಶಿಶು ಸಾವನ್ನಪ್ಪಿದೆ.
ಕಾಲು ಜಾರಿ ಬಿದ್ದಿದ್ದ ಗರ್ಭಿಣಿ ಬೆಳಗಾವಿಯ ಬೈಲಹೊಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ತೀವ್ರನೋವು ಕಾಣಿಸಿಕೊಂದ ಹಿನ್ನೆಲೆಯಲ್ಲಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲು ಸೂಚಿಸಲಾಗಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ತನ್ನ ಅತ್ತೆ ಜೊತೆ ಆಸ್ಪತ್ರೆಗೆ ಬಂದು ದಾಖಲಾದ ಮಹಿಳೆಗೆ ಡಿ.9ರಂದು ರಾತ್ರಿ ಹೆರಿಗೆಯಾಗಿತ್ತು. ಮಗು ಕೇವಲ 735 ಗ್ರಾಂ ತೂಕವಿತ್ತು. ತೂಕ ಕಡಿಮೆ ಇದ್ದ ಕರಣಕ್ಕೆ ಎನ್ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಶಿಶುವನ್ನು ಆರೈಕೆ ಮಾಡಬೇಕಿದ್ದ ತಾಯಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ.
ಮಹಿಳೆ ತನ್ನ ಅತ್ತೆ ಜೊತೆ ಆಸ್ಪತ್ರೆಯಿಂದ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ತೂಕ ಕಡಿಮೆ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶುವನ್ನು ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ಮಗು ಇಂದು ಮೃತಪಟ್ಟಿದೆ.
ನವಜಾತ ಶಿಶುವನ್ನು ಬಿಟ್ಟು ಪರಾರಿಯಾಗಿರುವ ತಾಯಿ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.