ಬೆಳಗಾವಿ: ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಬೊಲೆರೋ ವಾಹನ ಅಪಘಾತ ಮಾಡಿದ ಚಾಲಕ ಕಲ್ಲು ತೂರಿ ಬೆದರಿಕೆ ಹಾಕಿದ್ದಾಗಿ ಕಟ್ಟಿದ್ದ.
ಮರಾಠಿಗರು ಕಲ್ಲು ತೋರಿದ್ದರಿಂದ ವಾಹನದ ಗಾಜು ಜಖಂಕೊಂಡಿದೆ ಎಂದು ಹೇಳಿದ್ದ. ಬೆಳಗಾವಿಯ ಸುವರ್ಣಸೌಧದ ಬಳಿ ಘಟನೆ ನಡೆದಿದೆ ಎಂದು ಚಾಲಕ ಚೇತನ್ ಹೇಳಿದ್ದು, ಬೆಳಗಾವಿಯ ಹಿರೆಬಾಗೇವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ತನಿಖೆಯಲ್ಲಿ ಸರ್ಕಾರಿ ಕಾರ್ ಚಾಲಕ ಚೇತನ್ ನಾಟಕ ಬಹಿರಂಗವಾಗಿದೆ. ಅಧಿವೇಶನದ ಕರ್ತವ್ಯಕ್ಕಾಗಿ ಚಾಮರಾಜಪೇಟೆಯಿಂದ ಬೆಳಗಾವಿಗೆ ಬಂದಿದ್ದ ಚೇತನ್ ನಿನ್ನೆ ಸಂಜೆ ಬೆಳಗಾವಿಗೆ ಬರುವ ಮೊದಲೇ ಬೊಲೆರೋ ವಾಹನ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ವಾಹನದ ಮುಂಭಾಗ ಗಾಜು ಜಖಂ ಆಗಿದೆ.
ಹಿರೇಬಾಗೇವಾಡಿ ಟೋಲ್ ನಲ್ಲಿ ವಾಹನದ ಗಾಜು ಜಖಂ ಆಗಿರುವುದು ಬಯಲಿಗೆ ಬಂದಿದ್ದು, ಸಿಸಿಟಿವಿ ದೃಶ್ಯ ತೋರಿಸಿದಾಗ ಚಾಲಕ ಚೇತನ್ ತಪ್ಪೊಪ್ಪಿಕೊಂಡಿದ್ದಾನೆ. ಚಾಲಕನ ವಿರುದ್ಧ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ.
ಬಾರ್ ಒಂದರಲ್ಲಿ ಮದ್ಯಪಾನ ಮಾಡಿ ಬೆಳಗಾವಿ ಕಡೆಗೆ ಬರುವಾಗ ಹಿರೇ ಬಾಗೇವಾಡಿ ಟೋಲ್ ನಾಕಾ ಬಳಿ ಸ್ಟೀಲ್ ಬಾರ್ ಸಾಗಿಸುತ್ತಿದ್ದ ಲಾರಿಗೆ ಬೊಲೆರೋ ಡಿಕ್ಕಿ ಹೊಡೆದು ವಾಹನದ ಗಾಜು ಜಕಂಗೊಂಡಿದೆ. ತನ್ನ ತಪ್ಪು ಗೊತ್ತಾದರೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎನ್ನುವ ಭಯದಿಂದ ಚೇತನ್ ಕಟ್ಟು ಕತೆ ಕಟ್ಟಿ ಮರಾಠಿಗರು ಕಲ್ಲು ತೂರಾಟ ನಡೆಸಿಮ ಬೆದರಿಕೆ ಹಾಕಿದ್ದಾರೆ ಎಂದು ಸುಳ್ಳು ದೂರು ನೀಡಿದ್ದಾನೆ. ಪೊಲೀಸರು ತನಿಖೆ ನಡೆಸಿದಾಗ ಈ ವಿಚಾರ ಗೊತ್ತಾಗಿದೆ.