
ಬೆಳಗಾವಿ: ಎರಡು ಮಕ್ಕಳ ತಂದೆಯೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಘಟನೆ ಬೆಳಗಾವಿ ಜಿಲೆಯ ಕುಲಗೋಡದಲ್ಲಿ ನಡೆದಿದೆ.
ಬಸಪ್ಪ ಅಡಿವೆಪ್ಪ ಹಳ್ಳೂರ್ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚರವೆಸಗಿದ ಕಾಮುಕ. ಸಂತ್ರಸ್ತೆ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರವೆಸಗಿ ಆಕೆ 8 ತಿಂಗಳ ಗರ್ಭಿಣಿಯಾಗಿದ್ದಾಳೆ. ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದು, ತನಿಖೆ ವೇಳೆ ಆರೋಪಿ ಇಬ್ಬರು ಮಕ್ಕಳ ತಂದೆ ಎಂಬುದು ತಿಳಿದುಬಂದಿದೆ.