
ಬೆಳಗಾವಿ: ಮಾರ್ಚ್ 15 ರಂದು ಉದ್ಯಮಿ ರಾಜು ದೊಡ್ಡಬಣ್ಣವರ್ ಅವರನ್ನು ಹತ್ಯೆ ಮಾಡಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಎರಡನೇ ಪತ್ನಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿ ಹತ್ಯೆಗೆ ಎರಡನೇ ಪತ್ನಿಯಿಂದಲೇ ಸುಪಾರಿ ನೀಡಲಾಗಿದೆ. ಪತಿಯನ್ನು ಹತ್ಯೆ ಮಾಡಲು 10 ಲಕ್ಷ ರೂಪಾಯಿಗೆ ಸುಪಾರಿ ನೀಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಪತಿಯ ಪಾರ್ಟ್ ನರ್ ಗಳಿಗೆ ಎರಡನೇ ಪತ್ನಿ ಸುಪಾರಿ ನೀಡಿದ್ದು, ಎರಡನೇ ಪತ್ನಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪತ್ನಿ ಕಿರಣಾ, ಧರ್ಮೇಂದ್ರ ಮತ್ತು ಶಶಿಕಾಂತ್ ಅವರನ್ನು ಬೆಳಗಾವಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆನ್ನಲಾಗಿದೆ.