ಬೆಳಗಾವಿ: ಗ್ರಾಹಕರ ಸೋಗಿನಲ್ಲಿ ಸೀರೆ ಅಂಗಡಿಗೆ ಬಂದು ದುಬಾರಿ ಬೆಲೆಯ ಸೀರೆಗಳನ್ನು ಕಳವು ಮಾಡುತ್ತಿದ್ದ ಆರು ಮಹಿಳೆಯರು ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಸುನೀತಾ, ರಾಣಿ, ಕನಕದುರ್ಗ, ಮಣಿ, ರಜನಿ, ಚುಕ್ಕಮ್ಮ, ವೆಂಕಟೇಶರಾವ್, ವೆಂಕಟೇಶ್ ರಾವುಲು ಬಂಧಿತರು. ಬೆಳಗಾವಿಯ ವಿರೂಪಾಕ್ಷ ಸಿಲ್ಕ್ ಅಂಡ್ ಸ್ಯಾರೀಸ್ ಮಳಿಗೆಯಲ್ಲಿ ನವೆಂಬರ್ 9ರಂದು ಗ್ರಾಹಕರ ಸೋಗಿನಲ್ಲಿ ಬಂದು 1.40 ಲಕ್ಷ ರೂ ಮೌಲ್ಯದ ಸೀರೆಗಳನ್ನು ಕಳವು ಮಾಡಿದ್ದರು.
ಗ್ರಾಹಕರ ಸೋಗಿನಲ್ಲಿ ಬರುತ್ತಿದ್ದ ಇವರು ಕಾಂಗರೂ ಚೀಲವನ್ನು ಜೋಡಿಸಿಕೊಂಡಿರುತ್ತಿದ್ದರು. ಸಿಸಿ ಕ್ಯಾಮೆರಾದಲ್ಲಿ ಸೀರೆ ಕದಿಯುವ ದೃಶ್ಯ ಕಾಣಿಸಿದಂತೆ ಮಹಿಳೆಯರು ಅಡ್ಡಲಾಗಿ ನಿಂತು ಮತ್ತೊಬ್ಬರು ಸೀರೆ ಕದಿಯುತ್ತಿದ್ದರು. ಕಡೆ ಬಜಾರ್ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 7 ಲಕ್ಷ ರೂ. ಮೌಲ್ಯದ ಕಾರ್, 8 ಮೊಬೈಲ್ ಹಾಗೂ ದುಬಾರಿ ಬೆಲೆಯ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ.