
ಬೆಳಗಾವಿ: ತಂದೆ ಹಾಗೂ ಅಣ್ಣನೇ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಚಿಕ್ಕನಂದಿಹಳ್ಳಿಯಲ್ಲಿ ನಡೆದಿದೆ.
ಮಂಜುನಾಥ್ ಉಳ್ಳಾಗಡ್ಡಿ (25) ಕೊಲೆಯಾಗಿರುವ ಯುವಕ. ತಂದೆ ನಾಗಪ್ಪ ಹಾಗೂ ಅಣ್ಣ ಗುರುಪಾದ ಸೇರಿ ಮಂಜುನಾಥ್ ನನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾರೆ.
ಮಾರ್ಚ್ 12ರಂದು ಮಂಜುನಾಥ್ ಮದುವೆ ನಿಗದಿಯಾಗಿತ್ತು. ತಮ್ಮನ ಮದುವೆಗೆಂದು ಸೇನೆಯಲ್ಲಿದ್ದ ಅಣ್ಣ ರಜೆ ಮೇಲೆ ಬಂದಿದ್ದ. ನಿನ್ನೆ ಕಂಠಪೂರ್ತಿ ಕುಡಿದು ಬಂದಿದ್ದ ಮಂಜುನಾಥ್, ಕಿರಿಕಿರಿ ಮಾಡುತ್ತಿದ್ದ. ಈ ವೇಳೆ ಜಗಳ ನಡೆದು, ಗಲಾಟೆ ವಿಕೋಪಕ್ಕೆ ಹೋಗಿದೆ.
ಗಲಾಟೆ ವೇಳೆ ಹೊಡೆದಾಡಿಕೊಂಡಿದ್ದು, ತಂದೆ ಹಾಗೂ ಅಣ್ಣ ಮಂಜುನಾಥ್ ನನ್ನು ಹತ್ಯೆ ಮಾಡಿದ್ದಾರೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.