ಬೆಳಗಾವಿ: ಬಳ್ಳಾರಿ ಬಳಿಕ ಬೆಳಗಾವಿ ಜಿಲ್ಲೆಯಲ್ಲಿಯೂ ಬಾಣಂತಿಯರು ಹಾಗೂ ಶಿಶುಗಳ ಸರಣಿ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿಯಲ್ಲಿ 6 ತಿಂಗಳಲ್ಲಿ 29 ಬಾಣಂತಿಯರು ಹಾಗೂ 322 ಶಿಶುಗಳು ಸಾವನ್ನಪ್ಪಿದ್ದು, ಆತಂಕಕ್ಕೆ ಕಾರಣವಾಗಿದೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್, ಪೌಷ್ಠಿಕ ಆಹಾರದ ಸಮಸ್ಯೆಯಿಂದಾಗಿ ಸಾವಾಗಿದೆ ಎಂದು ಡಿಹೆಚ್ ಒ ತಿಳಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರ ಜಿಲ್ಲೆಯಲ್ಲಿಯೇ ಈ ದುರಂತ ಸಂಭವಿಸಿದೆ. ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ನಮ್ಮ ಸರ್ಕಾರವೂ ಬ್ಲ್ಯಾಕ್ ಲಿಸ್ಟ್ ನ ಜೊತೆ ಸೇರಿಇರುವ ಕಂಪನಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಚೆನ್ನೈನಲ್ಲಿರುವ ಕಂಪನಿಗೆ ಪೌಷ್ಠಿಕ ಆಹಾರದ ಟೆಂಡರ್ ಕೊಟ್ಟಿದ್ದಾರೆ. ಪೌಷ್ಠಿಕ ಆಹಾರ ಪೂರೈಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿದೆ. ಸಿಇಎಂ ಗಳೇ ಇದರಲ್ಲಿ ಡೀಲ್ ಮಾಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಇದೇ ಕಂಪನಿಗೆ ಟೆಂಡರ್ ನೀಡಿದ್ದರು. ಪೌಷ್ಠಿಕ ಆಹಾರದ ಕೊರತೆಯಿಂದ ನವಜಾತ ಶಿಶುಗಳು ಸಾವನ್ನಪ್ಪುತ್ತಿದ್ದರೂ ಈ ಬಗ್ಗೆ ಇಲಾಖೆ ಕ್ರಮ ಕೈಗೊಂಡಿಲ್ಲ. ಬಳ್ಳಾರಿ ಮಾದರಯಲ್ಲಿ ಬೆಳಗಾವಿಯಲ್ಲಿಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.