alex Certify BIG NEWS: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ ವಿಸ್ತರಣೆ; ತಿರುಪತಿ-ಹುಬ್ಬಳ್ಳಿ ರೈಲಿನ ಸಮಯ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ ವಿಸ್ತರಣೆ; ತಿರುಪತಿ-ಹುಬ್ಬಳ್ಳಿ ರೈಲಿನ ಸಮಯ ಬದಲಾವಣೆ

ಬೆಳಗಾವಿ: ಭಾರಿ ಮಳೆಯಿಂದ ಉಂತಾದ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ರಸ್ತೆಗಳು, ಸೇತುವೆಗಳು ಮುಳುಗಡೆಯಾಗಿದ್ದು, ಸಂಚಾರ ಮಾರ್ಗವೇ ಬಂದ್ ಆಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಬೆಳಗಾವಿ ಹಾಗೂ ಮಹಾರಾಷ್ಟ್ರದ ಮೀರಜ್ ನಡುವೆ ವಿಶೇಷ ರೈಲು ಸೇವೆ ಆರಂಭಿಸಿದೆ.

ಬೆಳಗಾವಿ ಹಾಗೂ ಮೂರಜ್ ನಡುವೆ ಸಂಚರಿಸುವ ವಿಶೇಷ ರೈಲನ್ನು ಕೆಲ ದಿನಗಳವರೆಗೆ ವಿಸ್ತರಿಸಲಾಗಿದೆ. ಬೆಳಗಾವಿ-ಮೀರಜ್ -ರೈಲು ಸಂಖ್ಯೆ 07301 , ಮೀರಜ್-​ ಬೆಳಗಾವಿ (07302), ಬೆಳಗಾವಿ-ಮೀರಜ್​ (07303), ಮೀರಜ್-ಬೆಳಗಾವಿ (07304) ವಿಶೇಷ ರೈಲನ್ನು ಆಗಸ್ಟ್​ 5 ರಿಂದ 10ರವರೆಗೆ ವಿಸ್ತರಿಸಲಾಗಿದೆ.

ಇದೇ ವೇಳೆ ರೈಲು ಸಂಖ್ಯೆ. 07657 ತಿರುಪತಿ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ರೈಲು ಆಗಸ್ಟ್ 5 ಮತ್ತು 7, 2024 ರಂದು ತಿರುಪತಿಯಿಂದ 180 ನಿಮಿಷ ತಡ ಅಥವಾ ಬೇಗ ಹೊರಡುವ ಸಾಧ್ಯತೆ ಇದೆ.

ರೈಲು ಸಂಖ್ಯೆ 07658 ಎಸ್‌ಎಸ್‌ಎಸ್ ಹುಬ್ಬಳ್ಳಿ-ತಿರುಪತಿ ಡೈಲಿ ಪ್ಯಾಸೆಂಜರ್ ವಿಶೇಷ, ಆಗಸ್ಟ್ 4, 5 ಮತ್ತು 7, 2024 ರಂದು ಪ್ರಾರಂಭವಾಗುವ ಪ್ರಯಾಣವನ್ನು ರೇಣಿಗುಂಟಾ-ಗೂಟಿ ನಿಲ್ದಾಣಗಳ ನಡುವೆ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಎಂದು ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...