alex Certify BIG NEWS: ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸಂಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸಂಚಾರ

ಬೆಳಗಾವಿ: ಪಶ್ಚಿಮ ಘಟ್ಟ, ಮಹಾರಾಷ್ಟ್ರ, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಭಾರಿ ಮಳೆಯಾಗುತ್ತಿದ್ದು, 7 ನದಿಗಳು ಪ್ರವಾಹದ ಅಬ್ಬರದಲ್ಲಿ ಹರಿಯುತ್ತಿವೆ. ಘಟಪ್ರಭಾ ನದಿ ವ್ಯಾಪ್ತಿಯಲ್ಲಿ 44 ಸೇತುವೆಗಳು ಮುಳುಗಡೆಯಾಗಿವೆ. ಇದರಿಂದಾಗಿ ಸಾರಿಗೆ ಸಂಪರ್ಕ ಸಂಪೂರ್ಣ ಕಡಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಹಾಗೂ ಮೀರಜ್ ನಡುವೆ ವಿಶೇಷ ರೈಲು ಸಂಚಾರ ಕಲ್ಪಿಸಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ದಕ್ಷಿಣ ನೈಋತ್ಯ ರೈಲ್ವೆಯಿಂದ ಬೆಳಗಾವಿ ಹಾಗೂ ಮಹಾರಾಷ್ಟ್ರದ ಮೀರಜ್ ನಡುವೆ ವಿಶೇಷ ಪ್ಯಾಸೆಂಜರ್ ರೈಲು ವ್ಯವಸ್ಥೆ ಮಾಡಿದೆ.

ಆಗಸ್ಟ್ 1ರಿಂದ 4ರವರೆಗೆ ಈ ರೈಲು ಸಂಚಾರ ನಡೆಸಲಿದೆ. ವೇಳಾಪಟ್ಟಿ ಹೀಗಿದೆ:

ಬೆಳಗಾವಿ-ಮೀರಜ್ ರೈಲು ಆ-01 (07301) ಮುಂಜಾನೆ 6 ಗಂಟೆಗೆ ಬೆಳಗಾವಿ ನಿಲ್ದಾಣದಿಂದ ಹೊರಟು ಮುಂಜಾನೆ 9ಕ್ಕೆ ಮೀರಜ್ ನಿಲ್ದಾಣ ತಲುಪಲಿದೆ.
ಮೀರಜ್-ಬೆಳಗಾವಿ ರೈಲು ಸಂಖ್ಯೆ (07302) ಮುಂಜಾನೆ 9.50ಕ್ಕೆ ಮೀರಜ್​ನಿಂದ ಹೊರಟು ಮಧ್ಯಾಹ್ನ 12.50 ಕ್ಕೆ ಬೆಳಗಾವಿ ನಿಲ್ದಾಣ ತಲುಪಲಿದೆ.
ಬೆಳಗಾವಿ-ಮೀರಜ್ ರೈಲು ಆ.01ರ ಮಧ್ಯಾಹ್ನ 01.30 ಗಂಟೆಗೆ ಬೆಳಗಾವಿ ನಿಲ್ದಾಣದಿಂದ ಹೊರಟು ಸಂಜೆ 04.30ಕ್ಕೆ ಮೀರಜ್ ತಲುಪಲಿದೆ.
ಮೀರಜ್-ಬೆಳಗಾವಿ ರೈಲು ಆ.01 ಸಂಜೆ 05.35 ಕ್ಕೆ ಮೀರಜ್​ನಿಂದ ಹೊರಟು ರಾತ್ರಿ 08.35 ಕ್ಕೆ ಬೆಳಗಾವಿ ನಿಲ್ದಾಣ ತಲುಪಲಿದೆ.ಆಗಸ್ಟ್ 01ರಿಂದ ಆಗಸ್ಟ್ 04ರ ವರೆಗೆ ಬೆಳಗಾವಿ-ಮೀರಜ್ ರೈಲು ದಿನಕ್ಕೆ 2 ಬಾರಿ ಓಡಾಟ ನಡೆಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...