ಬೆಳಗಾವಿ: ಮೈಕ್ರೋ ಫೈನಾನ್ಸ್ ನವರ ಕಾಟಕ್ಕೆ ನೊಂದ ಜನರು ಹಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮತ್ತೆ ಹಲವರು ಊರಿಗೇ ಊರೇ ಖಾಲಿ ಮಾಡಿಕೊಂಡು ಹೋಗುತ್ತಿದ್ದಾರೆ. ಫೈನಾನ್ಸ್ ಕಂಪನಿಗಳ ಕಿರುಕುಳ ರಾಜ್ಯದಲ್ಲಿ ಮಿತಿ ಮೀರುತ್ತಿದ್ದು, ಜನರು ಬೀದಿಪಾಲಾಗುತ್ತಿದ್ದಾರೆ.
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಬಾಣಂತಿ, ಹಸುಗೂಸನ್ನು ಲೆಕ್ಕಿಸದೇ ಮನೆಯವರನ್ನೆಲ್ಲ ಹೊರಹಾಕಿ, ಪಾತ್ರೆ, ಬಟ್ಟೆಗಳನ್ನೆಲ್ಲ ಮನೆಯಿಂದ ಆಚೆ ತಂದಿಟ್ಟು, ಮನೆ ಜಪ್ತಿ ಮಾಡಿರುವ ಘಟನೆ ಬೆಳಗಾವಿಯ ತಾರಿಹಾಳ ಗ್ರಾಮದಲ್ಲಿ ನಡೆದಿದೆ.
ದಿಕ್ಕು ತೋಚದೇ ಒಂದು ತಿಂಗಳ ಹಸುಗೂಸಿನೊಂದಿಗೆ ಬಾಣಂತಿ ಹಾಗೂ ತಾಯಿ-ತಂದೆ ಮನೆಯ ಮುಂದೆ ಕುಳಿತು ಕಣ್ಣೀರಿಟ್ಟಿದ್ದಾರೆ. ಕಳೆದ 5 ವರ್ಷಗಳ ಹಿಂದೆ ಫೈನಾನ್ಸ್ ಕಂಪನಿಯಲ್ಲಿ 5 ಲಕ್ಷ ರೂಪಾಯಿಯನ್ನು ಲೋಹರ್ ಎಂಬುವವರು ಸಾಲವಾಗಿ ಪಡೆದಿದ್ದರಂತೆ. ಮೂರು ವರ್ಷಗಳ ಕಲಾ ನಿರಂತರವಾಗಿ ಕಂತು ತುಂಬುತ್ತಿದ್ದೇನೆ. ಆದರೆ ಅನಾರೋಗ್ಯ, ಮಗಳ ಹೆರಿಗೆ ಕಾರಣದಿಂದಾಗಿ ಕಳೆದ 6 ಇಂಗಳಿಂದ ಕಂತು ತುಂಬಲು ಸಾಧ್ಯವಾಗಿರಲಿಲ್ಲ. ಸಮಯಾವಕಾಶ ನೀದುವಂತೆ ಕೇಳಿದ್ದರೂ ಅವಕಾಶ ಕೊಡದೇ ಪೊಲೀಸರು ಹಾಗೂ ಫೈನಾನ್ಸ್ ಅಧಿಕಾರಿಗಳ ಸಮ್ಮುಖದಲ್ಲಿ ಫೈನಾನ್ಸ್ ಸಿಬ್ಬಂದಿ ಮನೆಯಿಂದ ವಸ್ತುಗಳನ್ನು, ಪಾತ್ರೆ, ಬಟ್ಟೆಗಳನ್ನೆಲ್ಲ ಹೊರಗಿಟ್ಟು ನಮ್ಮನು ಹೊರಹಾಕಿ ಮನೆ ಜಪ್ತಿ ಮಾಡಿ ಹೋಗಿದ್ದಾರೆ.
ಮನೆ ಜಪ್ತಿ ಮಾಡಲಾಗಿದೆ ಎಂದು ಮನೆಯ ಗೋಡೆಯ ಮೇಲೆ ಬರೆದು ಹೋಗಿದ್ದಾರೆ. 5 ಲಕ್ಷಕ್ಕೆ ಒಂದೇ ಹಂತದಲ್ಲಿ 7.5 ಲಕ್ಷ ಹಣ ತುಂಬುವಂತೆ ಹೇಳುತ್ತಿದ್ದಾರೆ. ಅಷ್ಟೊಂದು ಹಣ ನಿಂತ ಜಾಗದಲ್ಲಿ ನಾವು ಎಲ್ಲಿಂದ ತರಬೇಕು? ಎಂದು ಕಣ್ಣೀರಿಟ್ಟಿದ್ದಾರೆ.