
ಬೆಳಗಾವಿ: ಮೊಬೈಲ್ ನಲ್ಲಿಟ್ಟದ್ದ ಹಣ ಹಾಗು ಸಿಮ್ ಕಾರ್ಡ್ ಗಾಗಿ ಯುವಕರ ಗ್ಯಾಂಗ್ ವ್ಯಕ್ತಿಯೊಬ್ಬರಿಗೆ ಚಾಕು ಇರಿದ ಘಟನೆ ಬೆಳಗಾವಿ ಜಿಲ್ಲೆಯ ಬೋಗಾರವೇಸ್ ನಲ್ಲಿ ನಡೆದಿದೆ.
ಸುರೇಶ್ ವಾರಂಗ್ ಹಲ್ಲೆಗೊಳಗಾದ ವ್ಯಕ್ತಿ. ನಿಖಿಲ್ ಕರುಣೆ ಎಂಬಾತ ಸುರೇಶ್ ಬಳಿ ಒಂದು ಸಲ ಮೊಬೈಲ್ ಕೊಡು ಫೋನ್ ಮಾಡಬೇಕು ಎಂದು ಹೇಳಿ ಮೊಬೈಲ್ ಪಡೆದವನು ಅದರಲ್ಲಿಟ್ಟಿದ್ದ 1500 ರೂಪಾಯಿ ಹಣ ಹಾಗೂ ಸಿಮ್ ಕಾರ್ಡ್ ನ್ನು ಎಗರಿಸಿ ಪರಾರಿಯಾಗಿದ್ದ. ಸಿಮ್ ಕಾರ್ಡ್ ಹಾಗೂ ಹಣ ವಾಪಾಸ್ ಕೊಡುವಂತೆ ಸುರೇಶ್ ಕೇಳಲು ಹೋದಾಗ ನಿಖಿಲ್ ಹಾಗೂ ಗ್ಯಾಂಗ್ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿರುವುದಾಗಿ ಆರೋಪಿಸಲಾಗಿದೆ.
ಸುರೇಶ್ ತೊಡೆಯ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದ್ದು, ಬೆಳಗವೈ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಡೇಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.