
ಬೆಳಗಾವಿ: ಬಟ್ಟೆ ತೊಳೆಯಲು ಹೋಗಿ ನಾಲ್ವರು ಸೋದರರು ನೀರು ಪಾಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೂವರು ಸೋದರರ ಮೃತದೇಹ ಪತ್ತೆಯಾಗಿದೆ.
ನಿನ್ನೆ ಸಂಜೆ ಒಬ್ಬರು, ಇಂದು ಮೂವರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಎನ್.ಡಿ.ಆರ್.ಎಫ್. ತಂಡದಿಂದ ಕಾರ್ಯಾಚರಣೆ ನಡೆಸಿ ಶವ ಹೊರ ತೆಗೆಯಲಾಗಿದೆ. ಹಿರಿಯ ಸಹೋದರ ಪರಸಪ್ಪ ಬನಸೋಡೆ ಶವ ನಿನ್ನೆ ಪತ್ತೆಯಾಗಿದ್ದು, ಇವತ್ತು ಶಂಕರ್, ಸದಾಶಿವ, ಮತ್ತು ಧರೆಪ್ಪ ಬನಸೋಡೆ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಒಂದೇ ಕುಟುಂಬದ ನಾಲ್ವರು ಕೃಷ್ಣಾ ನದಿ ಪಾಲಾಗಿದ್ದರು.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲ್ಯಾಳ ಬಳಿ ಬಟ್ಟೆ ತೊಳೆಯಲು ಹೋದಾಗ ದುರ್ಘಟನೆ ಸಂಭವಿಸಿದ್ದು, ಕಾಲು ಜಾರಿ ಬಿದ್ದ ಒಬ್ಬರನ್ನು ರಕ್ಷಿಸಲು ಹೋಗಿ ದುರಂತ ಸಂಭವಿಸಿತ್ತು. ಒಬ್ಬರ ಹಿಂದೊಬ್ಬರಂತೆ ಹೋದ ನಾಳವರು ಸಹೋದರರು ನೀರು ಪಾಲಾಗಿದ್ದರು.