alex Certify BIG NEWS: ಬೆಳಗಾವಿಯಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಕೂಗಿದ ವಿಚಾರ: ಮೇಯರ್, ಉಪ ಮೇಯರ್ ವಿರುದ್ಧ ದೂರು ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಳಗಾವಿಯಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಕೂಗಿದ ವಿಚಾರ: ಮೇಯರ್, ಉಪ ಮೇಯರ್ ವಿರುದ್ಧ ದೂರು ದಾಖಲು

ಬೆಳಗಾವಿ: ಬೆಳಗಾವಿಯಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಕೂಗಿದ ವಿಚಾರವಾಗಿ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ವಿರುದ್ಧ ದೂರು ದಾಖಲಾಗಿದೆ.

ಬೆಳಗಾವಿಯ ಅನಗೋಳದಲ್ಲಿ ಛತ್ರಪತಿ ಸಂಬಾಜಿ ಮಹಾರಾಜ ಪ್ರತಿಮೆ ಅನಾವರಣ ವೇಳೆ ಜಿಲ್ಲಾಡಳಿತದ ಆದೇಶ ಉಲ್ಲಂಘನೆ ಮಾಡಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಲಾಗಿದೆ. ಇದು ನಾಡಿಗೆ ಮಾಡಿದ ದ್ರೋಹ ಎಂಬ ಆಕ್ರೋಶ ವ್ಯಕ್ತವಾಗಿದೆ. ಜೈ ಮಹಾರಾಷ್ಟ್ರ ಘೋಷಣೆ ಕೂಗಿದವರ ವಿರುದ್ಧ ಕಿತ್ತೂರು ಕರ್ನಾಟಕ ಸೇನೆ ಅಧ್ಯಕ್ಷ ಮಹದೇವ ತಳವಾರ ದೂರು ನೀಡಿದ್ದಾರೆ.

ಬೆಳಗಾವಿ ಮೇಯರ್ ಸವಿತಾ ಕಾಂಬಳೆ, ಉಪ ಮೇಯರ್ ವಿರುದ್ಧ ಬೆಳಗಾವಿ ನಗರ ಟಿಳಕವಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಪಾಲಿಕೆಯಿಂದ 45 ಲಕ್ಷ ಅನುದಾನದಲ್ಲಿ ಮೂರ್ತಿ ನಿರ್ಮಾಣ ಮಡಲಾಗಿದೆ. ಶಾಸಕ ಅಭಯ್ ಪಾಟೀಲ್ ಅನಧಿಕೃತವಾಗಿ ಪ್ರತಿಮೆ ಲೋಕಾರ್ಪಣೆ ಮಾಡಿದ್ದಾರೆ. ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದರೂ ಮೂರ್ತಿ ಲೋಕಾರ್ಪಣೆ ಮಾಡಿ ಉದ್ಧಟತನ ಮೆರೆಯಲಾಗಿದೆ. ಮೂರ್ತಿ ಲೋಕಾರ್ಪಣೆ ವೇಳೆ ಜೈ ಮಹಾರಾಷ್ಟ್ರ ಘೋಷಣೆ ಕೂಗಲಾಗಿದೆ. ಮಹಾರಾಷ್ಟ್ರ ಸಚಿವ ಶಿವೇಂದ್ರ ರಾಜೆ ಬೋಸಲೆ ಈ ರೀತಿ ಘೋಷಣೆ ಕೂಗಿದ್ದಾರೆ. ಈ ವೇಳೆ ಬಿಜೆಪಿ ಶಾಸಕರು, ಮೇಯರ್, ಉಪ ಮೇಯರ್ ಚಪ್ಪಾಳೆ ತಟ್ಟಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ಆಪಮಾನ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಹದೇವ ತಳವಾರ ದೂರು ದಾಖಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...