ಬೆಳಗಾವಿ: ಕುಡಿದ ಅಮಲಿನಲ್ಲಿ ಮಗಳ ಮೇಲೆಯೇ ಎಗರಿದ್ದ ಪಾಪಿ ಪತಿಯನ್ನು ಪತ್ನಿಯೇ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ.
ಶ್ರೀಮಂತ ಇಟ್ನಾಳ ಪತ್ನಿಯಿಂದಲೇ ಕೊಲೆಯಾಗಿರುವ ವ್ಯಕ್ತಿ. ಸಾವಿತ್ರಿ ಇಟ್ನಾಳ್ ಪತಿಯನ್ನೇ ಕೊಂದ ಪತ್ನಿ. ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಶ್ರೀಮಂತ ಇಟ್ನಾಳ, ಪುತ್ರಿಯ ಮೇಲೆ ರಾಕ್ಷನಂತೆ ಎರಗಿದ್ದ. ಇದರಿಂದ ಬೇರೆ ದಾರಿ ಕಾಣದೇ ಪಾಪಿ ಪತಿಯನ್ನು ಕಲ್ಲು ಎತ್ತಿಹಾಕಿ ಸಾವಿತ್ರಿ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಬಳಿಕ ಶವವನ್ನು ಎರಡು ಭಾಗ ಮಾಡಿ ಬಾವಿಗೆ ಎಸೆದಿದ್ದಾಳೆ.
ಸ್ಥಳದಲ್ಲಿದ್ದ ರಕ್ತದ ಕಲೆ, ಶವ ಸಾಗಿಸಿದ್ದ ಬ್ಯಾರಲೆ ಗಳನ್ನು ಸ್ವಚ್ಛವಾಗಿ ತೊಳೆದು, ಬಟ್ಟೆಗಳನ್ನು ಸುಟ್ಟು ಹಾಕಿದ್ದಳು. ಆದಾಗ್ಯೂ ಆರೋಪಿ ಸುಳಿವು ಪತ್ತೆಮಾಡಿದ ಚಿಕ್ಕೋಡಿ ಠಾಣೆ ಪೊಲೀಸರು ಪತ್ನಿ ಸಾವಿತ್ರಿಯನ್ನು ಬಂಧಿಸಿದ್ದಾರೆ.