ಬೆಳಗಾವಿ: ಸರ್ಕಾರಿ ಪದವಿ ಪೂರ್ವ ಕಾಲೇಜು ಅತಿಥಿ ಉಪನ್ಯಾಸಕರು ಬೆಳಗಾವಿ ಸುವರ್ಣ ಸೌಧದ ಬಳಿ ಧರಣಿ ನಡೆಸುತ್ತಿದ್ದು, ಈ ವೇಳೆ ಓರ್ವ ಅತಿಥಿ ಉಪನ್ಯಾಸಕರು ಏಕಾಏಕಿ ಕುಸಿದು ಬಿದ್ದ ಘಟನೆ ನಡೆದಿದೆ.
ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿ ವಿವಿಧ ಜಿಲ್ಲೆಗಳಲ್ಲಿ ಅಂದ ಆಗಮಿಸಿರುವ ಅತಿಥಿ ಉಪನ್ಯಾಸಕರು ಸುವರ್ಣ ಸೌಧದ ಬಳಿ ಧರಣಿ ನಡೆಸುತ್ತಿದ್ದಾರೆ. ಧರಣಿ ನಿರತರ ಬಳಿ ವಿಧಾನಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ ಆಗಮಿಸಿ, ಪ್ರತಿಭಟನಾಕಾರರ ಮನವಿ ಆಲಿಸಿದರು. ಗೌರವ ಧನ ಹೆಚ್ಚಳದ ಬಗ್ಗೆ ಭರವಸೆ ನೀಡಿದರು.
ಧರಣಿ ನಿರತರ ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಓರ್ವ ಧರಣಿ ನಿರತ ಉಪನ್ಯಾಸಕಿ ಇದ್ದಕ್ಕಿದಂತೆ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದಾರೆ. ತಕ್ಷಣ ಕಾರ್ಯಪ್ರವೃತ್ತದ್ರಾದ ಡಾ.ಧನಂಜಯ್ ಸರ್ಜಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ತಮ್ಮದೇ ಕಾರಿನಲ್ಲಿ ಕರೆದೊಯ್ದು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮನವೀಯತೆ ಮೆರೆದಿದ್ದಾರೆ.
ಪರಿಷತ್ ಸದಸ್ಯರ ಮಾನವೀಯತೆಗೆ ಎಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಅಸ್ವಸ್ಥ ಅತಿಥಿ ಉಪನ್ಯಾಸಕಿ ಗುಣಮುಖರಾಗಿದ್ದಾರೆ.