![](https://kannadadunia.com/wp-content/uploads/2023/06/breaking-news-poster-design-template-d020bd02f944a333be71e17e3a38db24_screen-1.jpg)
ಬೆಳಗಾವಿ: ಕ್ಷುಲ್ಲಕ ಕಾರನಕ್ಕೆ ಆಟೋ ಚಾಲಕನೊಬ್ಬ ಗೋವಾ ಮಾಜಿ ಶಾಸಕ ಲಾವೋ ಮಾಮಲೇದಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂದ ಅವರು ಸ್ಥಳದಲ್ಲೇ ಸಾವನ್ನಪ್ಪಿರ್ವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ನಗರದ ಶ್ರೀನಿವಾಸ್ ಲಾಡ್ಜ್ ಬಳಿ ಈ ಘಟನೆ ನಡೆದಿದೆ. ಗೋವಾದ ಪೋಂಡಾ ಕ್ಷೇತ್ರದ ಮಾಜಿ ಶಾಸಕ ಲಾವೋ ಮಾಮಲೇದಾರ್ (69) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಳಗಾವಿಯ ಖಡೇಬಜಾರ್ ಬಳಿ ಲಾವೋ ಮಾಮಲೇದಾರ್ ಅವರ ಕಾರು ಆಟೋಗೆ ಟಚ್ ಆಗಿತ್ತು. ಬಳಿಕ ಲಾವೋ ಅವರು ಬೆಳಗಾವಿ ನಗರದ ಶ್ರೀನಿವಾಸ್ ಲಾಡ್ಜ್ ಬಳಿ ಬಂದಿದ್ದರು. ಈ ವೇಳೆ ಲಾಡ್ಜ್ ಬಳಿ ಬಂದ ಆಟೋ ಚಾಲಕ ಏಕಾಏಕಿ ಮಾಜಿ ಶಾಸಕ ಲಾವೋ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾದ ಲಾವೋ ಮಾಮಲೇದಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.