ಬೆಳಗಾವಿ: ಎಂಬಿಎ ಪದವೀಧರೆಯೊಬ್ಬರು ಪಿಜಿಯಲ್ಲಿಯೇ ಆತ್ಮಹತ್ಯೆ ಶರಣಾಗಿರುವ ಘಟನೆ ಬೆಳಗಾವಿಯ ನೆಹರು ನಗರದಲ್ಲಿ ನಡೆದಿದೆ.
ವಿಜಯಪುರ ಮೂಲದ ಐಶ್ವರ್ಯ ಆತ್ಮಹತ್ಯೆಗೆ ಶರಣಾಗಿರುವ ಯುವತಿ. ಎಂಬಿಎ ಪದವಿ ಮುಗಿಸಿದ್ದ ಐಶ್ವರ್ಯ ಕೆಲಕ್ಕಾಗಿ ಬೆಳಗಾವಿಯಲ್ಲಿ ಪಿಜಿಯಲ್ಲಿದ್ದರು. ಕಳೆದ ಮೂರು ತಿಂಗಳಿಂದ ಕಂಪನಿಯೊಂದರಲ್ಲಿ ತರಬೇತಿ ಪಡೆಯುತ್ತಿದ್ದಳು ಎಂದು ತಿಳಿದುಬಂದಿದೆ.
ನಿನ್ನೆ ಸಂಜೆ ತನ್ನ ಸ್ನೇಹಿತೆಯೊಂದಿಗೆ ಫೋನ್ ನಲ್ಲಿ ಮಾತನಾಡಿದ್ದ ಐಶ್ವರ್ಯ ಬಳಿಕ ಪಿಜಿ ರೂಮಿಗೆ ಬಂದು ಬಾಗಿಲು ಹಾಕಿಕೊಂಡವಳು ತೆಗೆದಿಲ್ಲ. ಪರಿಶೀಲನೆ ನಡೆಸಿದಾಗ ನೇಣಿಗೆ ಕೊರಳೊಡ್ದಿರುವುದು ಬೆಳಿಕೆ ಬಂದಿದೆ.
ಯುವತಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬೆಳಗಾವಿ ಎಪಿಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.