ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಆಲಕನೂರ ಗ್ರಾಮದಲ್ಲಿ ಎರಡೂವರೆ ವರ್ಷದ ಮಗು ಬೋರ್ ವೆಲ್ ಗೆ ಬಿದ್ದಿದೆ.
ಶರತ್ ಹಸಿರೇ ಎಂಬ ಎರಡೂವರೆ ವರ್ಷದ ಮಗು ಬೋರ್ವೆಲ್ ಗೆ ಬಿದ್ದಿರುವುದಾಗಿ ಮಾಹಿತಿ ಸಿಕ್ಕಿದೆ. ಮನೆ ಬಳಿ ಆಟವಾಡುತ್ತಿದ್ದ ಶರತ್ ನಿನ್ನೆ ಸಂಜೆಯಿಂದಲೇ ನಾಪತ್ತೆಯಾಗಿದ್ದು, ಇವತ್ತು ಸಂಜೆ ಬೋರ್ ವೆಲ್ ಗೆ ಬಿದ್ದಿರುವುದು ಬೆಳಕಿಗೆ ಬಂದಿದೆ.
ಮನೆಯಿಂದ 200 ಮೀಟರ್ ದೂರದಲ್ಲಿ ಬೋರ್ವೆಲ್ ಕೊರೆಸಲಾಗಿದೆ. ಬಾಲಕನ ಕುಟುಂಬದವರು ತೋಟದ ಮನೆಯಲ್ಲಿ ವಾಸವಾಗಿದ್ದಾರೆ. ಸುಮಾರು 15 ಅಡಿ ಆಳದಲ್ಲಿ ಶರತ್ ಸಿಲುಕಿರುವ ಮಾಹಿತಿ ಗೊತ್ತಾಗಿದೆ. ರಕ್ಷಣೆಗಾಗಿ ಕ್ರಮಕೈಗೊಳ್ಳಲಾಗಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.