
ಬೆಳಗಾವಿ: ಗುತ್ತಿಗೆಗೆ ಗಾಳಿಪಟದ ಮಾಂಜಾ ದಾರ ಸಿಲುಕಿ 5 ವರ್ಷದ ಬಾಲಕ ಮೃತಪಟ್ಟ ಘಟನೆ ಬೆಳಗಾವಿಯ ಗಾಂಧಿನಗರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಹುಕ್ಕೇರಿ ತಾಲೂಕಿನ ಹತ್ತರಗಿಯ ವರ್ಧನ ಮೃತಪಟ್ಟ ಬಾಲಕ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಂದೆಯೊಂದಿಗೆ ಬಟ್ಟೆ ಖರೀದಿಸಿದ ಬಾಲಕ ವಡಗಾವಿಯ ಮಾವನ ಮನೆಗೆ ಹೋಗಿ ಅಲ್ಲಿಂದ ತಂದೆಯೊಂದಿಗೆ ಬೈಕ್ ನಲ್ಲಿ ಊರಿಗೆ ತೆರಳುತ್ತಿದ್ದ.
ಮುಂದೆ ಕುಳಿತಿದ್ದ ವರ್ಧನ್ ಕೈಯಲ್ಲಿ ಗಾಳಿಪಟ ಹಿಡಿದುಕೊಂಡಿದ್ದ. ಗಾಂಧಿನಗರದ ಸೇತುವೆ ಮೇಲೆ ಗಾಳಿಗೆ ಗಾಳಿಪಟ ಹಾರಿದ್ದು, ವರ್ಧನನ ಕುತ್ತಿಗೆಗೆ ಮಾಂಜಾ ದಾರ ಬಿಗಿದುಕೊಂಡಿದೆ. ಆತನ ತಂದೆ ದಾರ ತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗದೆ ಕೊರಳಿಗೆ ದಾರ ಸುತ್ತಿಕೊಂಡು ಸ್ಥಳದಲ್ಲೇ ವರ್ಧನ್ ಮೃತಪಟ್ಟಿದ್ದಾನೆ.