ಹೈದರಾಬಾದ್: ಬೇಡಿಕೊಂಡರೂ ಯಾರೂ ಮುಂದೆ ಬರಲಿಲ್ಲ ಎಂದು ಹೈದರಾಬಾದ್ ನಲ್ಲಿ ಬರ್ಬರವಾಗಿ ಹತ್ಯೆಗೀಡಾದ ವ್ಯಕ್ತಿಯ ಪತ್ನಿ ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ಶುಕ್ರವಾರ ತನ್ನ ಪತಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆಯನ್ನು ಸ್ಮರಿಸಿದ ದಲಿತ ವ್ಯಕ್ತಿಯ ಪತ್ನಿ ಅಶ್ರಿನ್ ಸುಲ್ತಾನಾ, ಕಬ್ಬಿಣದ ರಾಡ್ ಗಳಿಂದ ಹೊಡೆದು ಸಾರ್ವಜನಿಕವಾಗಿ ಕೊಂದಿದ್ದು, ತನ್ನ ಪತಿಗೆ ಥಳಿಸುವಾಗ ಸುತ್ತಮುತ್ತಲಿನ ಜನರ ಸಹಾಯಕ್ಕಾಗಿ ಬೇಡಿಕೊಂಡಿದ್ದೇನೆ. ಆದರೆ ಯಾರೂ ಮುಂದೆ ಬರಲಿಲ್ಲ ಎಂದು ಹೇಳಿದ್ದಾರೆ.
ಸುಲ್ತಾನಾ ಮತ್ತು ನಾಗರಾಜು ಬೈಕ್ ನಲ್ಲಿ ತೆರಳುವಾಗ ಅಡ್ಡಗಟ್ಟಿದ ಆಕೆಯ ಆಕೆಯ ಸಹೋದರ, ಇನ್ನೊಬ್ಬ ವ್ಯಕ್ತಿಯೊಂದಿಗೆ ನಾಗರಾಜು ಮೇಲೆ ಹಲ್ಲೆ ನಡೆಸಿ ಕಬ್ಬಿಣದ ರಾಡ್ ನಿಂದ ಥಳಿಸಿ, ಚಾಕುವಿನಿಂದ ಇರಿದಿದ್ದಾನೆ.
ನನ್ನ ಪತಿ(ನಾಗರಾಜು) ತಲೆಗೆ ರಾಡ್ ನಿಂದ ಹೊಡೆಯುತ್ತಲೇ ಇದ್ದರು, ಅವನಿಗೆ ತುಂಬಾ ರಕ್ತಸ್ರಾವವಾಯಿತು. ನಾನು ಸುತ್ತಮುತ್ತಲಿನವರಲ್ಲಿ ಸಹಾಯ ಕೇಳಿದೆ, ಆದರೆ ಯಾರೂ ಸಹಾಯಕ್ಕೆ ಬರಲಿಲ್ಲ, ನಾನು ನನ್ನ ಸಹೋದರನಿಗೆ ನನ್ನ ಗಂಡನನ್ನು ಬಿಟ್ಟು ಹೊಡೆಯುವುದನ್ನು ನಿಲ್ಲಿಸಿ ಎಂದು ಕೇಳಿದೆ, ಆದರೆ ಅವನು ನನ್ನ ಮಾತನ್ನು ಕೇಳಲಿಲ್ಲ. ನಾಗರಾಜು ಹೆಲ್ಮೆಟ್ ಧರಿಸಿದ್ದರೂ ರಾಡ್ ನಿಂದ ಹೊಡೆದ ಕಾರಣ ಅದು ಹಾನಿಗೊಳಗಾಯಿತು. ಅವನ ತಲೆಗೆ ತೀವ್ರ ಪೆಟ್ಟು ಬಿದ್ದಿತು ಎಂದು ತಿಳಿಸಿದ್ದಾರೆ.
ಸಹಾಯ ಮಾಡಲು ಸುತ್ತಮುತ್ತಲಿನ ಜನರನ್ನು ಬೇಡಿಕೊಂಡರೂ ಯಾರೂ ಮುಂದೆ ಬರಲಿಲ್ಲ: ಅವರು ಸಹಾಯ ಮಾಡಬಹುದಿತ್ತು. ಆದರೆ ಯಾರೂ ನೆರವಿಗೆ ಬರಲಿಲ್ಲ. ನನ್ನ ಸಹೋದರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ನನ್ನ ಪತಿ ನನ್ನ ಸಹೋದರನಿಗೆ ತಾನು ಮುಸ್ಲಿಂ ಆಗುತ್ತೇನೆ. ನನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ. ಆದರೆ ನನ್ನ ಸಹೋದರ ಒಪ್ಪಲಿಲ್ಲ. ಮದುವೆಯಾಗಬಾರದೆಂದು ನನ್ನನ್ನು ಹೊಡೆದಿದ್ದ ಎಂದು ಹೇಳಿದ್ದಾರೆ.
ಬಿಲ್ಲಿಪುರಂ ನಾಗರಾಜು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆಶ್ರಿನ್ ಸುಲ್ತಾನಾ ಅಲಿಯಾಸ್ ಪಲ್ಲವಿಯ ಇಬ್ಬರು ಸಂಬಂಧಿಕರನ್ನು ಹೈದರಾಬಾದ್ ನ ಸರೂರ್ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಆಶ್ರಿನ್ ಸುಲ್ತಾನ ಸೋದರ ಮೊಹಮ್ಮದ್ ಮಸೂದ್ ಅಹ್ಮದ್, ಸೈಯದ್ ಮೊಬಿನ್ ಅಹ್ಮದ್ ಎಂದು ಗುರುತಿಸಲಾಗಿದೆ.