ಅವರಿಬ್ಬರೂ ವೃತ್ತಿಯಲ್ಲಿ ಭಿಕ್ಷುಕರು. ಗಂಡ ಅಂಗವಿಕಲ, ಬೇರೆಯವರ ಸಹಾಯವಿಲ್ಲದೇ ಒಂದು ಹೆಜ್ಜೆ ಇಡೋದಕ್ಕೂ ಆತ ಕಷ್ಟಪಡ್ತಿದ್ದ. ಹಾಗಂತ ಸುಮ್ಮನೆ ಮನೆಯಲ್ಲಿ ಕೂತೇ ಇರೋಕ್ಕಾಗುತ್ತಾ..? ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ತಿದ್ದ. ಈತನ ಹೆಂಡತಿ ಕೂಡಾ ಭಿಕ್ಷೆ ಬೇಡಿ ಸಂಸಾರದ ಭಾರವನ್ನ ಸಮನಾಗಿ ಹಂಚಿಕೊಂಡಿದ್ದಳು. ಇದೇ ಭಿಕ್ಷುಕ ಈಗ ತನ್ನ ಹೆಂಡತಿಗೆ ಅಪರೂಪದ ಒಂದು ಉಡುಗೊರೆಯೊಂದನ್ನ ಕೊಟ್ಟಿದ್ಧಾನೆ. ಆ ಉಡುಗೊರೆ ಬೆಲೆ 90 ಸಾವಿರ ರೂಪಾಯಿ.
ಗಂಡ – ಹೆಂಡತಿ ನಡುವೆ ಅನ್ಯೋನ್ಯತೆ ಇದ್ದರೆ ಸಂಸಾರದ ದೋಣಿ ಸರಾಗವಾಗಿ ಸಾಗುತ್ತೆ. ಸಿರಿವಂತಿಕೆ ಇರಲಿ, ಬಡತನ ಇರಲಿ ಈ ಸಂಬಂಧಕ್ಕೆ ಅದ್ಯಾವುದೂ ಲೆಕ್ಕಕ್ಕೆನೇ ಬರೋಲ್ಲ…… ಅವರದ್ದೇ ಆದ ಲೋಕ ಕಟ್ಟಿಕೊಂಡು ಅಲ್ಲೇ ನೆಮ್ಮದಿ ಕಂಡ್ಕೊಂಡು ಬಿಡ್ತಾರೆ. ಇಂತಹದ್ದೇ ಒಂದು ಆದರ್ಶ ಜೋಡಿ ಮಧ್ಯಪ್ರದೇಶದ ಚಿಂದ್ವಾಡಾದಲ್ಲಿ ನೋಡಬಹುದಾಗಿದೆ.
SBI ಗ್ರಾಹಕರು ನೀವಾಗಿದ್ದರೆ ತಪ್ಪದೆ ಓದಿ ಈ ಸುದ್ದಿ
ಗಂಡ ಸಂತೋಷ್ ಸಾಹು ಭಿಕ್ಷೆ ಬೇಡಿ ಅದರಲ್ಲೇ ಉಳಿಸಿದ ಹಣದಿಂದ ಅಂಗವಿಕಲರು ಓಡಿಸೋವಂತಹ ಮೊಪೆಡ್ ಖರೀದಿಸಿದ್ದಾನೆ. ಅದೇ ಮೊಪೆಡ್ನ್ನ ಹೆಂಡತಿ ಮುನ್ನಿ ಸಾಹುಗೆ ಉಡುಗೊರೆಯಾಗಿ ಕೊಟ್ಟಿದ್ದಾನೆ. ಈಗ ಗಂಡ ಹೆಂಡತಿ ಇಬ್ಬರೂ ಅದೇ ಮೊಪೆಡ್ನಲ್ಲಿ ರಾಜಾ-ರಾಣಿಯಂತೆ ಸುತ್ತಾಕ್ತಿದ್ದಾರೆ. ಗಂಡ ಸಾರಥಿಯಂತೆ ಮೊಪೆಡ್ ರೈಡ್ ಮಾಡ್ತಿದ್ರೆ, ಹಿಂದೆ ಹೆಂಡತಿ ರಾಣಿಯಂತೆ ಕೂತಿರುತ್ತಾಳೆ. ಇದೇ ಜೋಡಿ ಸಮಯ ಸಿಕ್ಕಾಗೆಲ್ಲ, ಅದೇ ಗಾಡಿ ಹತ್ತಿಕೊಂಡು ಭಿಕ್ಷೆನೂ ಬೇಡ್ತಾರೆ.