ಮುಟ್ಟಿನ ನೋವು ಅನುಭವಿಸಿದವ್ರಿಗೆ ಗೊತ್ತು. ನೋವು ಜೀವ ಹಿಂಡುತ್ತದೆ. ಇದ್ರಿಂದ ಮುಕ್ತಿ ಪಡೆಯಲು ಅನೇಕರು ಮುಟ್ಟಿನ ಸಮಯದಲ್ಲಿ ಮಾತ್ರೆಗಳ ಮೊರೆ ಹೋಗ್ತಾರೆ. ಕೆಲವರು ನಾಲ್ಕೈದು ದಿನಗಳವರೆಗೂ ಮಾತ್ರೆ ಸೇವನೆ ಮಾಡ್ತಾರೆ. ನೀವೂ ಮಾತ್ರೆ ಸೇವನೆ ಮಾಡುವವರಲ್ಲಿ ಒಬ್ಬರಾಗಿದ್ದರೆ ಈಗ್ಲೇ ಎಚ್ಚೆತ್ತುಕೊಳ್ಳಿ.
ತಜ್ಞರ ಪ್ರಕಾರ ಮುಟ್ಟಿನ ವೇಳೆ ಮಾತ್ರೆ ಸೇವನೆ ಒಳ್ಳೆಯದಲ್ಲ. ಪ್ರತಿ ತಿಂಗಳು ಮುಟ್ಟಿನ ಮಾತ್ರೆ ಸೇವನೆ ಮಾಡಿದ್ರೆ ಅಲ್ಸರ್, ಗ್ಯಾಸ್ಟ್ರಿಕ್, ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಕಾಡಲು ಶುರುವಾಗುತ್ತದೆ. ಈ ಅಲ್ಸರ್ ಆರಂಭದಲ್ಲಿ ಪತ್ತೆಯಾಗುವ ರೋಗವಲ್ಲ. ತಿಂಗಳು ಇಲ್ಲವೆ ವರ್ಷಗಳ ನಂತ್ರ ಅಲ್ಸರ್ ಇದೆ ಎಂಬುದು ಗೊತ್ತಾಗುತ್ತದೆ. ಕೊನೆಯಲ್ಲಿ ಪತ್ತೆಯಾಗುವ ಈ ರೋಗವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.
ಮುಟ್ಟಿನ ವೇಳೆ ಎರಡು ದಿನ ಸತತವಾಗಿ ಮಾತ್ರೆ ಸೇವನೆ ಮಾಡಿದ್ರೆ ಹಾಗೂ ಪ್ರತಿ ತಿಂಗಳು ಇದು ಮುಂದುವರೆದ್ರೆ ಅಪಾಯ ನಿಶ್ಚಿತ. ಕೊನೆ ಕೊನೆಯಲ್ಲಿ ಮಾತ್ರೆಗೆ ದೇಹ ಒಗ್ಗಿಕೊಳ್ಳುತ್ತದೆ. ಒಂದು ಮಾತ್ರೆಯಿಂದ ನೋವು ಕಡಿಮೆಯಾಗುವುದಿಲ್ಲ. ಒಮ್ಮೆಲೇ 2 ಮಾತ್ರೆ ಸೇವನೆ ಮಾಡುವವರೂ ಇದ್ದಾರೆ. ಇದು ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತದೆ.
ಮುಟ್ಟಿನ ವೇಳೆ ಕಾಡುವ ನೋವನ್ನು ನೈಸರ್ಗಿಕ ವಿಧಾನದ ಮೂಲಕ ಕಡಿಮೆ ಮಾಡಿಕೊಳ್ಳುವುದು ಉತ್ತಮ ಎನ್ನುತ್ತಾರೆ ತಜ್ಞರು. ಬಿಸಿ ನೀರಿನ ಸಹಾಯದಿಂದ ನೋವನ್ನು ಕಡಿಮೆ ಮಾಡಿಕೊಳ್ಳಬೇಕು ಅಥವಾ ನಾವು ಈಗಾಗಲೇ ಹೇಳಿರುವ ಮನೆ ಮದ್ದಿನ ಮೂಲಕ ನೋವು ಕಡಿಮೆ ಮಾಡಿಕೊಳ್ಳಬಹುದು ಹಾಗೇ ಆಹಾರದಲ್ಲಿ ಬದಲಾವಣೆ ಮಾಡಿಕೊಂಡು ಆ ದಿನಗಳಲ್ಲಿ ಕಾಡುವ ಹೊಟ್ಟೆ ನೋವನ್ನು ತಗ್ಗಿಸಬಹುದು.